ಮೈಸೂರು: ಕರ್ನಾಟಕ ತಂಡ ಇಲ್ಲಿ ಆರಂಭವಾದ ಇಂಡಸ್ ಬ್ಯಾಂಕ್ ನಾಗೇಶ್ ಟ್ರೋಫಿ ಟ್ವೆಂಟಿ–20 ಅಂಧರ ಕ್ರಿಕೆಟ್ ಟೂರ್ನಿಯ ಎರಡನೇ ಲೆಗ್‌ನ ಮೊದಲ ಪಂದ್ಯದಲ್ಲಿ ಜಯ ಸಾಧಿಸಿತು.
ಎಸ್‌ಜೆಸಿಇ, ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕರ್ನಾಟಕ ಎಂಟು ವಿಕೆಟ್‌ಗಳಿಂದ ಹರಿಯಾಣ ತಂಡವನ್ನು ಮಣಿಸಿತು.
ಮೊದಲು ಬ್ಯಾಟ್ ಮಾಡಿದ ಹರಿಯಾಣ ತಂಡ ದೀಪಕ್ ಮಲಿಕ್ ಅವರ ಶತಕದ (138, 65 ಎಸೆತ) ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 213 ರನ್ ಗಳಿಸಿತು. ಆತಿಥೇಯ ತಂಡ ಸುನಿಲ್ (98, 52 ಎಸೆತ) ಮತ್ತು ಲೋಕೇಶ್ (75, 58 ಎಸೆತ) ಅವರ ಭರ್ಜರಿ ಆಟದ ನೆರವಿನಿಂದ 19.1 ಓವರ್‌ಗಳಲ್ಲಿ ಗೆಲುವಿನ ಗಡಿ ದಾಟಿತು. ಮತ್ತೊಂದು ಪಂದ್ಯದಲ್ಲಿ ದೆಹಲಿ ತಂಡ ಗೋವಾ ಎದುರು 134 ರನ್‌ಗಳ ಭರ್ಜರಿ ಜಯ ಸಾಧಿಸಿತು
ಸಂಕ್ಷಿಪ್ತ ಸ್ಕೋರ್: ಹರಿಯಾಣ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 213 (ದೀಪಕ್ ಮಲಿಕ್ 138, ಚಂದನ್ 33, ಸುನಿಲ್ 27ಕ್ಕೆ 4, ಪುನೀತ್ 45ಕ್ಕೆ 1)
ಕರ್ನಾಟಕ 19.1 ಓವರ್‌ಗಳಲ್ಲಿ 2 ವಿಕೆಟ್‌ಗೆ 216 (ಸುನಿಲ್ 98, ಲೋಕೇಶ್ 75, ವಿನೀತ್ 40ಕ್ಕೆ 1, ರಾಂಬೀರ್ 42ಕ್ಕೆ 1)
ಫಲಿತಾಂಶ: ಕರ್ನಾಟಕಕ್ಕೆ 8 ವಿಕೆಟ್ ಗೆಲುವು; ಪಂದ್ಯಶ್ರೇಷ್ಠ: ಸುನಿಲ್ ರಮೇಶ್. ದೆಹಲಿ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 262 (ಇರ್ಫಾನ್ ದೇವನ್ 132, ಲೋಕೇಶ್ 49, ನೀಲೇಶ್ 47ಕ್ಕೆ 3, ಯಶ್ವಂತ್ 19ಕ್ಕೆ 1) ಗೋವಾ 20 ಓವರ್‌ಗಳಲ್ಲಿ 128 (ಸಂದೀಪ್ 43, ನೀಲೇಶ್ 26, ಪಿಂಟು 6ಕ್ಕೆ 1, ಮುಖೇಶ್ 7ಕ್ಕೆ 1)
ಫಲಿತಾಂಶ: ದೆಹಲಿ ತಂಡಕ್ಕೆ 134 ರನ್ ಗೆಲುವು; ಪಂದ್ಯಶ್ರೇಷ್ಠ: ಇರ್ಫಾನ್ ದೇವನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.