ADVERTISEMENT

ಆಲೂರಿನಲ್ಲಿ ಬೋಟ್ಸವಾನಾ ದೇಶದ ಆಟಗಾರರಿಗೆ ಕ್ರಿಕೆಟ್ ಪಾಠ

ಗಿರೀಶ ದೊಡ್ಡಮನಿ
Published 8 ಆಗಸ್ಟ್ 2025, 19:01 IST
Last Updated 8 ಆಗಸ್ಟ್ 2025, 19:01 IST
ಬೆಂಗಳೂರು ಸಮೀಪದ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಬೋಟ್ಸವಾನಾ ಕ್ರಿಕೆಟ್ ತಂಡದ ಅಟಗಾರರು 
ಬೆಂಗಳೂರು ಸಮೀಪದ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಬೋಟ್ಸವಾನಾ ಕ್ರಿಕೆಟ್ ತಂಡದ ಅಟಗಾರರು    

ಬೆಂಗಳೂರು: ದಕ್ಷಿಣ ಆಫ್ರಿಕಾದಲ್ಲಿರುವ  ಬೋಟ್ಸವಾನಾ ದೇಶದ ಕ್ರಿಕೆಟಿಗರಿಗೆ ಕರ್ನಾಟಕ ಕ್ರಿಕೆಟಿಗರೊಂದಿಗೆ ಆಡುವ ಅವಕಾಶ ಲಭಿಸಿದೆ. 

ನಗರ ಹೊರವಲಯದಲ್ಲಿರುವ ಆಲೂರಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಕ್ರೀಡಾಂಗಣದಲ್ಲಿ ಕಳೆದ  ನಾಲ್ಕು ದಿನಗಳಿಂದ ಬೋಟ್ಸವಾನಾ ಕ್ರಿಕೆಟ್ ತಂಡವು ಬೀಡುಬಿಟ್ಟಿದೆ. ಕರ್ನಾಟಕದ ತಂಡಗಳ ಎದುರು ಅಭ್ಯಾಸ ಪಂದ್ಯಗಳನ್ನು ಆಡುತ್ತಿದೆ.

ಈ ದೇಶದ ತಂಡವು 20 ವರ್ಷಗಳ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಹಸದಸ್ಯತ್ವ ಪಡೆದಿತ್ತು. 

ADVERTISEMENT

ದಕ್ಷಿಣ ಆಫ್ರಿಕಾ ಮತ್ತು ಭಾರತದ ಬಿಸಿಸಿಐ ಸಹಭಾಗೀತ್ವದಲ್ಲಿ ಬೋಟ್ಸವಾನಾ ತಂಡವು ಕ್ರಿಕೆಟ್‌ ತರಬೇತಿ ಮತ್ತು ಅನುಭವ ಪಡೆಯುತ್ತಿದೆ.

‘ಹೋದ ವರ್ಷ ಕರ್ನಾಟಕ ತಂಡದ ಆಟಗಾರರ ನಿಯೋಗವು ಬೋಟ್ಸವಾನಾ, ಕೆನ್ಯಾ ದೇಶಗಳಿಗೆ ತೆರಳಿ ಸ್ನೇಹಪರ ಪಂದ್ಯಗಳನ್ನು ಆಡಿತ್ತು. ಇದೀಗ ಆ ದೇಶದ ಆಟಗಾರರಿಗೆ ಕೆಎಸ್‌ಸಿಎ ಆತಿಥ್ಯ ನೀಡಿದೆ. ಉಭಯ ದೇಶಗಳ ನಡುವಿನ ಸೌಹಾರ್ದ, ಸಂಬಂಧಗಳಿಗೆ ಇದು ನೆರವಾಗಲಿದೆ’ ಎಂದು ಮೂಲಗಳು ತಿಳಿಸಿವೆ. 

ಕರ್ನಾಟಕ ಸೀನಿಯರ್ ಮತ್ತು ಯುವ ತಂಡಗಳ ಆಯ್ದ ಆಟಗಾರರ ತಂಡವು ಬೋಟ್ಸವಾನಾ ಎದುರು ಅಭ್ಯಾಸ ಪಂದ್ಯಗಳಲ್ಲಿ ಆಡುತ್ತಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.