ADVERTISEMENT

ODI | ಜೇಕಬ್ ಆಲ್‌ರೌಂಡ್ ಆಟ; ವೆಸ್ಟ್ ಇಂಡೀಸ್ ಎದುರು ಇಂಗ್ಲೆಂಡ್‌ಗೆ ಜಯ

400 ರನ್ ಪೇರಿಸಿದ ಆತಿಥೇಯರು; ಸೀಲ್ಸ್‌ಗೆ 4 ವಿಕೆಟ್

ಏಜೆನ್ಸೀಸ್
Published 30 ಮೇ 2025, 13:11 IST
Last Updated 30 ಮೇ 2025, 13:11 IST
ಇಂಗ್ಲೆಂಡ್ ತಂಡದ ಬ್ಯಾಟರ್‌ ಜೇಕಬ್ ಬೆಥೆಲ್ ಹೊಡೆತವೊಂದನ್ನು ಪ್ರಯೋಗಿಸಿದ ಶೈಲಿ   –ಎಎಫ್‌ಪಿ ಚಿತ್ರ
ಇಂಗ್ಲೆಂಡ್ ತಂಡದ ಬ್ಯಾಟರ್‌ ಜೇಕಬ್ ಬೆಥೆಲ್ ಹೊಡೆತವೊಂದನ್ನು ಪ್ರಯೋಗಿಸಿದ ಶೈಲಿ   –ಎಎಫ್‌ಪಿ ಚಿತ್ರ   

ಬರ್ಮಿಂಗ್‌ಹ್ಯಾಮ್: ಜೇಕಬ್ ಬೆಥೆಲ್ (82 ರನ್ ಮತ್ತು 18ಕ್ಕೆ1) ಆಲ್‌ರೌಂಡ್ ಆಟದ ಬಲದಿಂದ ಇಂಗ್ಲೆಂಡ್ ತಂಡವು ಗುರುವಾರ ವೆಸ್ಟ್ ಇಂಡೀಸ್ ಎದುರು ನಡೆದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಜಯಭೇರಿ ಬಾರಿಸಿತು. 

ಎಜ್‌ಬಾಸ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್‌ಇಂಡೀಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಜೇಕಬ್ ಸೇರಿದಂತೆ ನಾಲ್ವರು ಬ್ಯಾಟರ್‌ಗಳು ಅರ್ಧಶತಕ ದಾಖಲಿಸಿದರು. ಇದರಿಂದಾಗಿ  ಇಂಗ್ಲೆಂಡ್ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 400 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಅದಕ್ಕುತ್ತರವಾಗಿ ವಿಂಡೀಸ್ ಬಳಗಕ್ಕೆ 26.2 ಓವರ್‌ಗಳಲ್ಲಿ 162 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಆತಿಥೇಯ ತಂಡವು 3 ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ಇಂಗ್ಲೆಂಡ್ ತಂಡದ ಬ್ಯಾಟರ್‌ಗಳು ಟಿ20 ಮಾದರಿಯಲ್ಲಿಯೇ ಬ್ಯಾಟ್‌ ಬೀಸಿದ್ದರಿಂದ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಆರಂಭಿಕ್ ಬ್ಯಾಟರ್ ಬೆನ್ ಡಕೆಟ್ (60; 48ಎ, 4X6, 6X1), ಜೋ ರೂಟ್ (57; 65ಎ, 4X5) ಮತ್ತು ಹ್ಯಾರಿ ಬ್ರೂಕ್ (58; 45ಎ, 4X5, 6X3) ಅವರೂ ಅರ್ಧಶತಕ ದಾಖಲಿಸಿದರು. ಜೇಕಬ್ 8ಬೌಂಡರಿ ಮತ್ತು 5 ಸಿಕ್ಸರ್ ಬಾರಿಸಿ, 154.72ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದರು. 

ADVERTISEMENT

ಜೇಮಿ ಸ್ಮಿತ್ (37; 24ಎ), ಬಟ್ಲರ್ (37; 32ಎ) ಹಾಗೂ ವಿಲ್ ಜ್ಯಾಕ್ಸ್ (39; 24ಎ) ಕೂಡ ಉಪಯುಕ್ತ ಕಾಣಿಕೆ ನೀಡಿದರು. 

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 50 ಓವರ್‌ಗಳಲ್ಲಿ 8ಕ್ಕೆ400 (ಜೇಮಿ ಸ್ಮಿತ್ 37, ಬೆನ್ ಡಕೆಟ್ 60, ಜೋ ರೂಟ್ 57, ಹ್ಯಾರಿ ಬ್ರೂಕ್ 58, ಜೋಸ್ ಬಟ್ಲರ್ 37, ಜೇಕಬ್ ಬೆಥೆಲ್ 82, ವಿಲ್ ಜ್ಯಾಕ್ಸ್‌ 39, ಜೇಡನ್ ಸೀಲ್ಸ್ 84ಕ್ಕೆ4, ಅಲ್ಝರಿ ಜೋಸೆಫ್ 69ಕ್ಕೆ2, ಜಸ್ಟಿನ್ ಗ್ರೀವ್ಸ್‌ 68ಕ್ಕೆ2) ವೆಸ್ಟ್ ಇಂಡೀಸ್: 26.2 ಓವರ್‌ಗಳಲ್ಲಿ 162 (ಕೀಸಿ ಕಾರ್ಟಿ 22, ಶಾಯ್ ಹೋಪ್ 25, ಜೇಡನ್ ಸೀಲ್ಸ್‌ ಔಟಾಗದೇ 29, ಸಕೀಬ್ ಮೆಹಮೂದ್ 32ಕ್ಕೆ3, ಜೇಮಿ ಒವರ್ಟನ್ 22ಕ್ಕೆ3, ಆದಿಲ್ ರಶೀದ್ 50ಕ್ಕೆ2) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 238 ರನ್‌ಗಳ ಜಯ. ಪಂದ್ಯಶ್ರೇಷ್ಠ: ಜೇಕಬ್ ಬೆಥೆಲ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.