ADVERTISEMENT

ಧನುಷ್ಕ, ಮೆಂಡಿಸ್ ಮೇಲೆ ನಿಷೇಧಕ್ಕೆ ಶಿಫಾರಸು

ಪಿಟಿಐ
Published 29 ಜುಲೈ 2021, 19:31 IST
Last Updated 29 ಜುಲೈ 2021, 19:31 IST
ಕುಶಲ್ ಮೆಂಡಿಸ್– ಎಎಫ್‌ಪಿ ಚಿತ್ರ
ಕುಶಲ್ ಮೆಂಡಿಸ್– ಎಎಫ್‌ಪಿ ಚಿತ್ರ   

ಕೊಲಂಬೊ: ಇಂಗ್ಲೆಂಡ್‌ ಪ್ರವಾಸದಲ್ಲಿ ಬಯೋಬಬಲ್ ನಿಯಮ ಉಲ್ಲಂಘಿಸಿದ ತಂಡದ ಬ್ಯಾಟ್ಸ್‌ಮನ್‌ಗಳಾದ ಧನುಷ್ಕ ಗುಣತಿಲಕ ಮತ್ತು ಕುಶಾಲ್ ಮೆಂಡಿಸ್‌ ಮೇಲೆ ಎರಡು ವರ್ಷಗಳ ನಿಷೇಧ ಹೇರಲು ಶ್ರೀಲಂಕಾ ಕ್ರಿಕೆಟ್‌ ಮಂಡಳಿಯ (ಎಸ್‌ಎಲ್‌ಸಿ) ಶಿಸ್ತು ಸಮಿತಿಯು ಶಿಫಾರಸು ಮಾಡಿದೆ.

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ನಿರೋಶನ್ ಡಿಕ್ವೆಲ್ಲಾ ಮೇಲೆ 18 ತಿಂಗಳ ನಿಷೇಧಕ್ಕೂ ಸಮಿತಿ ಶಿಫಾರಸು ಮಾಡಲಾಗಿದೆ. ಅಲ್ಲದೆ ಮೂವರಿಗೂ ₹ 18 ಲಕ್ಷ ದಂಡವನ್ನೂ ವಿಧಿಸಲಾಗಿದೆ.

ಜೂನ್ ತಿಂಗಳ ಅಂತ್ಯದಲ್ಲಿ ಮೂರು ಏಕದಿನ ಪಂದ್ಯಗಳನ್ನಾಡಲು ಶ್ರೀಲಂಕಾ ತಂಡವು ಇಂಗ್ಲೆಂಡ್‌ಗೆ ತೆರಳಿತ್ತು. ಸರಣಿ ಆರಂಭಕ್ಕೂ ಮೊದಲು ಈ ಮೂವರು ಆಟಗಾರರು ಡುರ್ಹಾಮ್‌ನಲ್ಲಿ ಬಯೋಬಬಲ್ ನಿಯಮ ಉಲ್ಲಂಘಿಸಿದ್ದು ವರದಿಯಾಗಿತ್ತು. ಆ ತಕ್ಷಣಕ್ಕೆ ಮೂವರನ್ನೂ ಅಮಾನತು ಮಾಡಿ ಶ್ರೀಲಂಕಾಕ್ಕೆ ಕಳುಹಿಸಲಾಗಿತ್ತು.

ADVERTISEMENT

ಪ್ರಕರಣದ ವಿಚಾರಣೆಗಾಗಿ ಐದು ಸದಸ್ಯರ ಶಿಸ್ತು ಸಮಿತಿಯನ್ನು ರಚಿಸ ಲಾಗಿತ್ತು. ಸಮಿತಿಯ ಶಿಫಾರಸುಗಳಿಗೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯ ಕಾರ್ಯ ಕಾರಿ ಸಮಿತಿ ಅನುಮೋದನೆ ನೀಡಿದರೆ ಮಾತ್ರ ಈ ಶಿಕ್ಷೆ ಜಾರಿಯಾಗಲಿದೆ ಎಂದು ಎಸ್‌ಎಲ್‌ಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.