ADVERTISEMENT

ರಾಯಲ್ಸ್‌ನ ಮೊದಲ ಪಂದ್ಯಕ್ಕೆ ಬಟ್ಲರ್ ಅಲಭ್ಯ

ಪಿಟಿಐ
Published 20 ಸೆಪ್ಟೆಂಬರ್ 2020, 15:29 IST
Last Updated 20 ಸೆಪ್ಟೆಂಬರ್ 2020, 15:29 IST
ಜೋಸ್ ಬಟ್ಲರ್ –ರಾಯಿಟರ್ಸ್ ಚಿತ್ರ
ಜೋಸ್ ಬಟ್ಲರ್ –ರಾಯಿಟರ್ಸ್ ಚಿತ್ರ   

ದುಬೈ: ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮೊದಲ ಪಂದ್ಯಕ್ಕೆ ಇಂಗ್ಲೆಂಡ್‌ನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅಲಭ್ಯರಾಗಲಿದ್ದಾರೆ. ಕುಟುಂಬದೊಂದಿಗೆ ಇಲ್ಲಿಗೆ ಬಂದಿರುವ ಅವರು ಆರು ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಬೇಕಾಗಿರುವುದರಿಂದ ಕಣಕ್ಕೆ ಇಳಿಯಲಾರರು.

ರಾಜಸ್ಥಾನ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಎದುರು ಮಂಗಳವಾರ ಮೊದಲ ಪಂದ್ಯ ಆಡಲಿದೆ.

‘ಕುಟುಂಬದ ಜೊತೆ ಇಲ್ಲಿಗೆ ಬಂದಿದ್ದೇನೆ. ಆದ್ದರಿಂದ ಕ್ವಾರಂಟೈನ್ ಅವಧಿಯನ್ನು ಕಡ್ಡಾಯವಾಗಿ ಪೂರೈಸಬೇಕಾಗಿದೆ. ಹೀಗಾಗಿ ಮೊದಲ ಪಂದ್ಯದಲ್ಲಿ ಆಡುವುದು ಸಂದೇಹ. ಕುಟುಂಬದ ಜೊತೆ ಬರಲು ಅವಕಾಶ ನೀಡಿದ ರಾಯಲ್ಸ್‌ ಆಡಳಿತಕ್ಕೆ ನಾನು ಅಭಾರಿಯಾಗಿದ್ದೇನೆ’ ಎಂಬ ಅವರ ಹೇಳಿಕೆಯನ್ನು ತಂಡದ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಾಕಲಾಗಿದೆ.

ADVERTISEMENT

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಮುಗಿದ ನಂತರ ಎರಡೂ ದೇಶಗಳ 21 ಆಟಗಾರರು ಒಂದು ಕೆಲವು ದಿನಗಳಹಿಂದೆ ಇಲ್ಲಿಗೆ ಬಂದಿದ್ದಾರೆ. ಬಿಸಿಸಿಐ ಅವರ ಕ್ವಾರಂಟೈನ್ ಅವಧಿಯನ್ನು ಆರು ದಿನಗಳಿಂದ 36 ತಾಸುಗಳಿಗೆ ಇಳಿಸಿದೆ. ಎಲ್ಲರೂ ವಿಶೇಷ ವಿಮಾನದಲ್ಲಿ ಬಂದಿದ್ದು ಜೀವಸುರಕ್ಷಾ ವಲಯದಲ್ಲಿದ್ದಾರೆ.

ಆದರೆ ಬಟ್ಲರ್ ಪ್ರತ್ಯೇಕ ವಿಮಾನದಲ್ಲಿ ಬಂದಿದ್ದಾರೆ. ಆದ್ದರಿಂದ ಆರು ದಿನ ಕ್ವಾರಂಟೈನ್‌ನಲ್ಲಿರಬೇಕಾಗಿದೆ. ಇಂಗ್ಲೆಂಡ್‌ನ ಜೊಫ್ರಾ ಆರ್ಚರ್ ಮತ್ತು ಬೆನ್ ಸ್ಟೋಕ್ಸ್ ಕೂಡರಾಯಲ್ಸ್‌ ತಂಡದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.