ಕ್ರಿಕೆಟ್
(ಸಾಂಕೇತಿಕ ಚಿತ್ರ)
ಬೆಂಗಳೂರು: ಪಂಜಾಬ್ ತಂಡ, ಮೊಹಾಲಿಯ ಮುಲ್ಲನಪುರದ ಪಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಬಿಗಿಹಿಡಿತ ಸಾಧಿಸಿದ್ದು, ಸೆಮಿಫೈನಲ್ ಹಾದಿಯನ್ನು ಬಹುತೇಕ ಖಚಿತಪಡಿಸಿಕೊಂಡಿತು.
ನಾಲ್ಕು ದಿನಗಳ ಈ ಪಂದ್ಯದ ಮೂರನೇ ದಿನದಾಟ ಮುಗಿದಾಗ ಆತಿಥೇಯರು ಎರಡನೇ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 259 ರನ್ ಗಳಿಸಿದ್ದು ತಮ್ಮ ಒಟ್ಟು ಮುನ್ನಡೆಯನ್ನು 462 ರನ್‌ಗಳಿಗೆ ಉಬ್ಬಿಸಿದ್ದಾರೆ.
ಇದಕ್ಕೆ ಮೊದಲು ಪಂಜಾಬ್‌ನ 380 ರನ್‌ಗಳಿಗೆ ಉತ್ತರವಾಗಿ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ (ಮಂಗಳವಾರ: 9 ವಿಕೆಟ್‌ಗೆ 172) ಬುಧವಾರ ಬೆಳಿಗ್ಗೆ ಎರಡನೇ ಓವರ್‌ನಲ್ಲಿ 177 ರನ್‌ಗಳಿಗೆ ಆಲೌಟ್ ಆಗಿತ್ತು. ಇದರಿಂದ ಪಂಜಾಬ್‌ಗೆ 203 ರನ್‌ಗಳ ಭಾರಿ ಮುನ್ನಡೆ ದೊರಕಿತ್ತು.
ಮೊದಲ ಇನಿಂಗ್ಸ್‌ನಲ್ಲಿ 61 ರನ್ ಗಳಿಸಿದ್ದ ಪಂಜಾಬ್ ಆರಂಭ ಆಟಗಾರ ಜಸ್ಕರಣ್‌ವೀರ್ ಸಿಂಗ್ ಪಾಲ್ ಮತ್ತೊಮ್ಮೆ ಮಿಂಚಿ 168 ಎಸೆತಗಳಲ್ಲಿ 91 ರನ್ ಬಾರಿಸಿದರು. ಹರ್ಜಸ್ ಸಿಂಗ್ ಟಂಡನ್ (ಔಟಾಗದೇ 46) ಮತ್ತು ಆಯುಷ್ ಗೋಯಲ್ (ಔಟಾಗದೇ 32) ಮುರಿಯದ ಎಂಟನೇ ವಿಕೆಟ್‌ಗೆ 76 ರನ್ ಸೇರಿಸಿ ಪ್ರವಾಸಿ ತಂಡವನ್ನು ಕಾಡಿದರು.
ಸಂಕ್ಷಿಪ್ತ ಸ್ಕೋರು:
ಪಂಜಾಬ್: 380 ಮತ್ತು 85 ಓವರುಗಳಲ್ಲಿ 7 ವಿಕೆಟ್‌ಗೆ 259 (ಜಸ್ಕರಣ್‌ವೀರ್ ಸಿಂಗ್ ಪಾಲ್ 91, ಸಲೀಲ್ ಅರೋರಾ 34, ರಾಹುಲ್ ಕುಮಾರ್ 26, ಹರ್ಜಸ್ ಸಿಂಗ್ ಟಂಡನ್ ಬ್ಯಾಟಿಂಗ್ 46, ಆಯುಷ್ ಗೋಯಲ್ ಬ್ಯಾಟಿಂಗ್ 32; ಯಶೋವರ್ಧನ್ ಪರಂತಾಪ್ 36ಕ್ಕೆ2, ಶಶಿ ಕುಮಾರ್ ಕೆ. 50ಕ್ಕೆ2);
ಕರ್ನಾಟಕ: 61.2 ಓವರುಗಳಲ್ಲಿ 177 (ಮೆಕ್ನಿಲ್ ನೊರೊನಾ 78, ಅನೀಶ್ವರ ಗೌತಮ್ 35; ಆರ್ಯಮನ್ ಧಾಲಿವಾಲ್ 52ಕ್ಕೆ4, ಹರ್ಜಸ್ ಸಿಂಗ್ ಟಂಡನ್ 31ಕ್ಕೆ3).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.