ADVERTISEMENT

T20 WC: ನಾಯಕ ಸ್ಟರ್ಲಿಂಗ್‌ ಬಲಗಾಲಿಗೆ ಗಾಯ; ಐರ್ಲೆಂಡ್‌ ತಂಡಕ್ಕೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 0:06 IST
Last Updated 14 ಫೆಬ್ರುವರಿ 2026, 0:06 IST
<div class="paragraphs"><p>ಪೌಲ್‌ ಸ್ಟರ್ಲಿಂಗ್‌</p></div>

ಪೌಲ್‌ ಸ್ಟರ್ಲಿಂಗ್‌

   

ಕೊಲಂಬೊ: ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಈಗಾಗಲೇ ಎರಡು ಪಂದ್ಯ ಸೋತಿರುವ ಐರ್ಲೆಂಡ್‌ ತಂಡಕ್ಕೆ ಮತ್ತೊಂದು ಆಘಾತವಾಗಿದೆ. ನಾಯಕ ಪೌಲ್‌ ಸ್ಟರ್ಲಿಂಗ್‌ ಅವರು ಬಲಗಾಲಿನ ಮಂಡಿ ನೋವಿನಿಂದಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

35 ವರ್ಷ ವಯಸ್ಸಿನ ಸ್ಟರ್ಲಿಂಗ್‌ ಬದಲಿಗೆ ಅನ್‌ಕ್ಯಾಪ್ಡ್‌ ಆಟಗಾರ ಸ್ಯಾಮ್‌ ಟಾಪಿಂಗ್‌ 15 ಸದಸ್ಯರ ತಂಡದಲ್ಲಿ ಸ್ಥಾನಪಡೆದಿದ್ದಾರೆ.

ADVERTISEMENT

ಬಿ ಗುಂಪಿನಲ್ಲಿರುವ ಐರ್ಲೆಂಡ್‌ ತಂಡವು ಕೊಲಂಬೊದಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಒಮಾನ್‌ಅನ್ನು ಎದುರಿಸಲಿದೆ.

11ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕ್ಯಾಚ್‌ ಪಡೆಯುವ ವೇಳೆ ಸ್ಟರ್ಲಿಂಗ್‌ ಅವರ ಬಲಗಾಲಿಗೆ ಗಾಯವಾಗಿತ್ತು. ಬಳಿಕ, ಬ್ಯಾಟಿಂಗ್‌ನಲ್ಲಿ ರನ್‌ ಓಡುವಾಗ ಗಾಯ ಉಲ್ಬಣಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.