ADVERTISEMENT

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ಸುನೀಲ್ ಗಾವಸ್ಕರ್‌ಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 19:43 IST
Last Updated 6 ಮಾರ್ಚ್ 2021, 19:43 IST
ಸ್ಮರಣಿಕೆಯಾಗಿ ನೀಡಿದ ಟೆಸ್ಟ್ ಕ್ಯಾಪ್‌ನೊಂದಿಗೆ ಸುನಿಲ್ ಗಾವಸ್ಕರ್‌ –ಪಿಟಿಐ ಚಿತ್ರ
ಸ್ಮರಣಿಕೆಯಾಗಿ ನೀಡಿದ ಟೆಸ್ಟ್ ಕ್ಯಾಪ್‌ನೊಂದಿಗೆ ಸುನಿಲ್ ಗಾವಸ್ಕರ್‌ –ಪಿಟಿಐ ಚಿತ್ರ   

ಅಹಮದಾಬಾದ್: ಸುನೀಲ್ ಗಾವಸ್ಕರ್ ಅವರು ಟೆಸ್ಟ್‌ ಕ್ರಿಕೆಟ್‌ ಪದಾರ್ಪಣೆಗೆ ಶನಿವಾರ 50 ವರ್ಷ ತುಂಬಿತು. ಈ ಸಂದರ್ಭದಲ್ಲಿ ಅವರನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಸತ್ಕರಿಸಿತು.

ಮೊಟೇರಾ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಊಟದ ವಿರಾಮದ ಸಂದರ್ಭದಲ್ಲಿ 71 ವರ್ಷದ ಗಾವಸ್ಕರ್ ಅವರನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರುಸನ್ಮಾನಿಸಿದರು.

‘ಭಾರತ ತಂಡದ ಮಾಜಿ ನಾಯಕ ಗಾವಸ್ಕರ್ ಮತ್ತು ಅವರ ಆಗಿನ ಸಹ ಆಟಗಾರರು ದೇಶದ ಕ್ರಿಕೆಟ್‌ಗೆ ಮಜಬೂತಾದ ಅಡಿಪಾಯ ಹಾಕಿದರು. ಅದು ಈಗಲೂ ದೃಢವಾಗಿದೆ’ ಎಂದು ಗಂಗೂಲಿ ಹೇಳಿದರು.

ADVERTISEMENT

ಸಚಿನ್ ಟ್ವೀಟ್: ‘ನನಗೆ ಗಾವಸ್ಕರ್ ಅವರು ಸಾರ್ವಕಾಲಿಕ ಹೀರೊ. ಅವರ ಆಟವನ್ನು ನೋಡುತ್ತ, ಅದರಿಂದ ಕಲಿಯುತ್ತ ಬೆಳೆದೆ. ಅವರನ್ನೇ ಅನುಸರಿಸಿದೆ’ ಎಂದು ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.