ADVERTISEMENT

IND vs ENG 1st Test‌: ಸಂಕಷ್ಟದಲ್ಲಿರುವ ಟೀಂ ಇಂಡಿಯಾಗೆ ಕೊಹ್ಲಿ ಆಸರೆ

ಏಜೆನ್ಸೀಸ್
Published 9 ಫೆಬ್ರುವರಿ 2021, 8:22 IST
Last Updated 9 ಫೆಬ್ರುವರಿ 2021, 8:22 IST
ಚೇತೇಶ್ವರ್ ಪೂಜಾರ ಅವರೊಂದಿಗೆ ನಾಯಕ ವಿರಾಟ್‌ ಕೊಹ್ಲಿ ಚರ್ಚಿಸಿದರು –ಪಿಟಿಐ ಚಿತ್ರ
ಚೇತೇಶ್ವರ್ ಪೂಜಾರ ಅವರೊಂದಿಗೆ ನಾಯಕ ವಿರಾಟ್‌ ಕೊಹ್ಲಿ ಚರ್ಚಿಸಿದರು –ಪಿಟಿಐ ಚಿತ್ರ   

ಚೆನ್ನೈ: ಇಲ್ಲಿನ ಎಂ.ಸಿ.ಚಿದಾಂಬರಂ ಕ್ರೀಡಾಂಗಣಲದಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಮಂಗಳವಾರ ಐದನೇ ದಿನದಾಟ ಆರಂಭಿಸಿದ ಭಾರತಕ್ಕೆ ಶುಭಮನ್ ಗೀಲ್ (50) ಅರ್ಧಶತಕ, ವಿರಾಟ್‌ ಕೊಹ್ಲಿ ಔಟಾಗದೆ 45 ರನ್‌ ಗಳಿಸಿ ಆಸರೆಯಾಗಿದ್ದಾರೆ.

15 ರನ್‌ ಗಳಿಸಿದ್ದ ಚೇತೇಶ್ವರ್‌ ಪೂಜಾರ ಅವರನ್ನು ಜ್ಯಾಕ್ ಲೀಚ್ ಔಟ್‌ ಮಾಡಿದ್ದಾರೆ. ರಹಾನೆ 00, ವಾಷಿಂಗ್ಟನ್‌ ಸುಂದರ್ 00, ರಿಷಬ್‌ ಪಂತ್‌ 11 ರನ್‌ ಗಳಿಸಿ ಜೇಮ್ಸ್ ಆ್ಯಂಡರ್ಸನ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ.

ADVERTISEMENT

ಭೋಜನ ವಿರಾಮದ ವೇಳೆಗೆ ಭಾರತ 39 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 144 ರನ್‌ ಗಳಿಸಿದೆ. ನಾಯಕ ವಿರಾಟ್‌ ಕೊಹ್ಲಿ ಔಟಾಗದೆ 45, ಆರ್‌.ಅಶ್ವಿನ್‌ 2 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ತಂಡ ಗೆಲ್ಲುವಿಗೆ 276 ರನ್‌ಗಳ ಅಗತ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.