ADVERTISEMENT

ಹೊಸ ವರ್ಷಕ್ಕೆ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜನವರಿ 2026, 13:15 IST
Last Updated 2 ಜನವರಿ 2026, 13:15 IST
   

ಬಾಸ್ಸೆಟೆರೆ: ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ತಂಡದ ಸ್ಟಾರ್ ಆಟಗಾರ ಕ್ರಿಸ್ ಗೇಲ್ ಅವರು ಕ್ರಿಕೆಟ್‌ ಅಂಗಳದ ಹೊರಗೂ ಸದ್ದು ಮಾಡುತ್ತಿದ್ದಾರೆ.

ಹೊಸ ವರ್ಷದ ಸಂಭ್ರಮಕ್ಕಾಗಿ ಸೇಂಟ್ ಕಿಟ್ಸ್ ದ್ವೀಪದ ಬಾಸ್ಸೆಟೆರೆಯಲ್ಲಿ ನಡೆದ ಅಲ್ಟ್ರಾ ಕಾರ್ನೀವಲ್‌ನಲ್ಲಿ 46 ವರ್ಷದ ಕ್ರಿಸ್ ಗೇಲ್ ಅವರು ಸಾಂಪ್ರದಾಯಿಕ ಶೈಲಿಯ ವಿಭಿನ್ನ ಉಡುಗೆ ತೊಟ್ಟು ಮಿಂಚಿದ್ದಾರೆ.

ನಗರದ ಬೀದಿಯಲ್ಲಿ ಕಿಟ್ಟಿಟಿಯನ್ ಜಾನಪದ ಶೈಲಿಯ ‘ವೈಲ್ಡ್‌ ಬುಲ್’ ಎನ್ನುವ ನೃತ್ಯ ಮಾಡುತ್ತಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಪೋಸ್ಟ್‌ಗೆ ‘ಫಕ್ರಿ ಗ್ವಾನ್! 2026’ ಎಂದು ಅಡಿಬರಹ ನೀಡಿದ್ದಾರೆ.

ADVERTISEMENT

ಕೆರೆಬೀಯನ್‌ ಸಂಪ್ರದಾಯದ ನೃತ್ಯವಿರುವ, ಗೇಲ್‌ ಅವರ ಹೊಸ ಪೋಸ್ಟ್‌ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಾವಾಗಲೂ ವಿಶಿಷ್ಟ ರೀತಿಯಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿತ್ವ ಹೊಂದಿರುವ ಗೇಲ್‌, ಐಪಿಎಲ್‌ ಸಂದರ್ಭದಲ್ಲೂ ಮೈದಾನದಲ್ಲಿ ಹಾಗೂ ಮೈದಾನದ ಹೊರಗೆ ವಿಭಿನ್ನ ರೀತಿಯಲ್ಲಿ ಸಂಭ್ರಮಾಚರಣೆ ಮಾಡುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದರು.

2021ರ ಟಿ20 ವಿಶ್ವಕಪ್‌ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದಿರುವ ಕ್ರಿಸ್‌ ಗೇಲ್‌ ಅವರು ಇದುವರೆಗೂ ಅಧಿಕೃತ ನಿವೃತ್ತಿ ಘೋಷಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.