ADVERTISEMENT

ಸಿ.ಕೆ. ನಾಯ್ಡು ಟ್ರೋಫಿ: ಮನ್ವಂತ್–ಪಾರಸ್ ಜೊತೆಯಾಟ; ಕರ್ನಾಟಕ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2025, 14:28 IST
Last Updated 2 ಫೆಬ್ರುವರಿ 2025, 14:28 IST
ಮನ್ವಂತ್ ಕುಮಾರ್ ಎಲ್. 
ಮನ್ವಂತ್ ಕುಮಾರ್ ಎಲ್.    

ಬೆಂಗಳೂರು:  ಎಲ್‌. ಮನ್ವಂತ್ ಕುಮಾರ್ ಮತ್ತು ಪಾರಸ್ ಗುರುಭಕ್ಷ್‌ ಆರ್ಯ ಕೊನೆ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ 41 ರನ್‌ಗಳಿಂದ ಕರ್ನಾಟಕವು ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕೇರಳ ವಿರುದ್ಧದ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿತು. 

ಆಲೂರಿನ 3ನೇ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇರಳ ತಂಡವು 72.5 ಓವರ್‌ಗಳಲ್ಲಿ 327 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡಕ್ಕೆ ಅನೀಶ್ವರ್ ಗೌತಮ್ (71 ರನ್) ಮತ್ತು ಕೃತಿಕ್ ಕೃಷ್ಣ (68 ರನ್)  ಅರ್ಧಶತಕ ಗಳಿಸಿ ಆಸರೆಯಾದರು. 

ಆದರೂ ತಂಡವು 294 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತು. ಇನಿಂಗ್ಸ್‌ ಹಿನ್ನಡೆಯ ಆತಂಕ ಎದುರಿಸಿತು. 

ADVERTISEMENT

ಈ ಹಂತದಲ್ಲಿ ಕ್ರೀಸ್‌ನಲ್ಲಿದ್ದ ಮನ್ವಂತ್ (57; 82ಎ) ಅವರು ಅರ್ಧಶತಕ ಗಳಿಸಿದರು. ಅಲ್ಲದೇ ತಂಡವು ಮುನ್ನಡೆ ಸಾಧಿಸಲು ಕಾರಣರಾದರು. ಅವರಿಗೆ ಪಾರಸ್ ಗುರುಭಕ್ಸ್‌ ಆರ್ಯ (ಔಟಾಗದೆ 4; 23ಎಸೆತ) ಉತ್ತಮ ಜೊತೆ ನೀಡಿದರು. ತಂಡವು 8 ರನ್‌ಗಳ ಮುನ್ನಡೆ ಗಳಿಸಿತು. 

ಎರಡನೇ ಇನಿಂಗ್ಸ್ ಆರಂಭಿಸಿರುವ ಕೇರಳ ತಂಡವು 

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕೇರಳ: 72.5 ಓವರ್‌ಗಳಲ್ಲಿ 327. ಕರ್ನಾಟಕ: 88.3 ಓವರ್‌ಗಳಲ್ಲಿ 335 (ಮೋನಿಷ್ ರೆಡ್ಡಿ 38, ಕೆ.ಪಿ. ಕಾರ್ತಿಕೇಯ 45, ಅನೀಶ್ವರ್ ಗೌತಮ್ 71, ಕೃತಿಕ್ ಕೃಷ್ಣ 68, ಎಲ್. ಮನ್ವಂತ್ ಕುಮಾರ್ 57, ಕೆ. ಶಶಿಕುಮಾರ್ 12, ಅಭಿಜಿತ್ ಪ್ರವೀಣ 35ಕ್ಕೆ2) ಎರಡನೇ ಇನಿಂಗ್ಸ್: ಕೇರಳ: 8 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 43 (ಒಮರ್ ಅಬುಬಕರ್ ಔಟಾಗದೆ 23, ಪವನ್ ಶ್ರೀಧರ್ ಔಟಾಗದೆ 19) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.