ADVERTISEMENT

ಹೆಣ್ಣು ಮಗುವಿನ ಜನನ; ವಿರುಷ್ಕಾ ದಂಪತಿಗೆ ಶುಭಾಶಯಗಳ ಮಹಾಪೂರ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜನವರಿ 2021, 15:00 IST
Last Updated 11 ಜನವರಿ 2021, 15:00 IST
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ    

ಮುಂಬೈ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ದಂಪತಿಯು ಹೆಣ್ಣು ಮಗುವಿನ ಜನನದ ಸಂಭ್ರಮದಲ್ಲಿದ್ದಾರೆ. ಇದರಂತೆ ಸೆಲೆಬ್ರಿಟಿಗಳು ಸೇರಿದಂತೆ ವಿರುಷ್ಕಾ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಕ್ರಿಕೆಟ್ ಮಾಜಿ ಐಕಾನ್ ಸಚಿನ್ ತೆಂಡೂಲ್ಕರ್ ಅವರಿಂದ ಹಿಡಿದು ಕ್ರೀಡಾ ಹಾಗೂ ಬಾಲಿವುಡ್‌ನ ಪ್ರಮುಖ ತಾರೆಯರು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾಗೆ ಶುಭಾಶಗಳನ್ನು ಕೋರಿದ್ದಾರೆ.

ಸಚಿನ್ ತಮ್ಮ ಸಂದೇಶದಲ್ಲಿ ವಿರಾಟ್ ಕೊಹ್ಲಿ ಮಗಳ ಜೀವನವು ಉತ್ತಮ ಆರೋಗ್ಯ ಮತ್ತು ಪ್ರೀತಿಯಿಂದ ಕೂಡಿರಲಿ ಎಂದು ಆಶೀರ್ವದಿಸಿದ್ದಾರೆ.

ADVERTISEMENT

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿರಾಟ್ ಕೊಹ್ಲಿ ದಂಪತಿಗೆ ಹೆಣ್ಣು ಮಗು ಜನನವಾಗಿರುವ ಶುಭ ಸಮಾಚಾರನವನ್ನು ಹಂಚಿಕೊಂಡಿದೆ.

ಪ್ರಮುಖರ ಶುಭಾಶಯಗಳುಇಲ್ಲಿದೆ:

ಸಚಿನ್ ತೆಂಡೂಲ್ಕರ್

ಬಿಸಿಸಿಐ

ರೋಹಿತ್ ಶರ್ಮಾ

ಇರ್ಫಾನ್ ಪಠಾಣ್

ಅನಿಲ್ ಕುಂಬ್ಳೆ

ಸೈನಾ ನೆಹ್ವಾಲ್

ಅಂಜುಮ್ ಚೋಪ್ರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.