ADVERTISEMENT

ಕೂಚ್‌ ಬಿಹಾರ್ ಕ್ರಿಕೆಟ್ ಟೂರ್ನಿ: ಕರ್ನಾಟಕಕ್ಕೆ ಮೊದಲ ದಿನವೇ ಇನಿಂಗ್ಸ್‌ ಮುನ್ನಡೆ

ಕರ್ನಾಟಕ ತಂಡದ ಮಾರಕ ಸ್ಪಿನ್‌ ದಾಳಿಗೆ ಹಿಮಾಚಲ ಪ್ರದೇಶ ತಬ್ಬಿಬ್ಬು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 20:35 IST
Last Updated 19 ನವೆಂಬರ್ 2022, 20:35 IST
ಹಿಮಾಚಲ ಪ್ರದೇಶ ತಂಡದ ವಿಕೆಟ್‌ ಪಡೆ‌ದಾಗ ಕರ್ನಾಟಕ ತಂಡದ ಆಟಗಾರರು ಸಂಭ್ರಮಿಸಿದ ಕ್ಷಣ... –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹಿಮಾಚಲ ಪ್ರದೇಶ ತಂಡದ ವಿಕೆಟ್‌ ಪಡೆ‌ದಾಗ ಕರ್ನಾಟಕ ತಂಡದ ಆಟಗಾರರು ಸಂಭ್ರಮಿಸಿದ ಕ್ಷಣ... –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ವಿಶಾಲ್‌ ಒನತ್‌ (50 ರನ್, 7x4, 2x6) ಹಾಗೂ ವಿಜಯರಾಜ (53 ರನ್‌, 10x4) ಅವರ ಸುಂದರ ಅರ್ಧ ಶತಕಗಳು ಮತ್ತು ಮೊಹಸಿನ್‌ ಖಾನ್‌ (14ಕ್ಕೆ4) ಹಾಗೂ ಹಾರ್ದಿಕ ರಾಜ್‌(44ಕ್ಕೆ3) ಮಾರಕ ಸ್ಪಿನ್‌ ದಾಳಿಯ ಬಲದಿಂದ ಕರ್ನಾಟಕ ತಂಡವು ಮೊದಲ ದಿನವೇ ಇನಿಂಗ್ಸ್ ಮುನ್ನಡೆ ಪಡೆದಿದೆ.

ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡ ಕೂಚ್‌ ಬಿಹಾರ್‌ ಟ್ರೋಫಿಯ 19 ವರ್ಷದೊಳಗಿನವರ ವಿಭಾಗದ ಪಂದ್ಯದಲ್ಲಿ ಟಾಸ್‌ ಗೆದ್ದ ಹಿಮಾಚಲ ಪ್ರದೇಶ ಬ್ಯಾಟಿಂಗ್ ಆಯ್ದುಕೊಂಡಿತು. ಆತಿಥೇಯ ತಂಡದ ಬೌಲಿಂಗ್‌ ದಾಳಿಗೆ ತತ್ತರಿಸಿ, ಮೊದಲ ಇನಿಂಗ್ಸ್‌ನಲ್ಲಿ 59.4 ಓವರ್‌ಗಳಲ್ಲಿ 106 ರನ್‌ಗಳಿಗೆ ಆಲೌಟ್‌ ಆಯಿತು.

ಕರ್ನಾಟಕ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 29 ಓವರ್‌ಗಳಲ್ಲಿ 3 ವಿಕೆಟ್‌ಗೆ 132 ರನ್‌ ಕಲೆಹಾಕಿದೆ. ಪ್ರಖರ್‌ ಚತುರ್ವೇದಿ (11 ರನ್‌) ಹಾಗೂ ಧ್ರುವ ಪ್ರಭಾಕರ (7) ಕ್ರೀಸ್‌ನಲ್ಲಿದ್ದಾರೆ.

ADVERTISEMENT

ಸಂಕ್ಷಿಪ್ತ ಸ್ಕೋರು
ಹಿಮಾಚಲ ಪ್ರದೇಶ: ಮೊದಲ ಇನಿಂಗ್ಸ್‌ 59.4 ಓವರ್‌ಗಳಲ್ಲಿ 106 ರನ್‌(ಇನ್ನೇಶ್‌ ಮಹಾಜನ್ 22, ಅನಿಮೇಶ್ ಠಾಕೂರ್‌ 15, ಗಂಗಾಸಿಂಗ್ 16, ಮೊಹಸಿನ್ ಖಾನ್‌14ಕ್ಕೆ4, ಹಾರ್ದಿಕ್‌ರಾಜ್‌ 44ಕ್ಕೆ3).

ಕರ್ನಾಟಕ: ಮೊದಲ ಇನಿಂಗ್ಸ್‌ 29 ಓವರ್‌ಗಳಲ್ಲಿ 3 ವಿಕೆಟ್‌ಗೆ 132 ರನ್‌(ವಿಶಾಲ್ ಒನತ್ 50, ವಿಜಯರಾಜ 53, ಪಿಯೂಶ್‌ ಠಾಕೂರ್‌ 35ಕ್ಕೆ2, ಪ್ರವಲ್‌ ಸಿಂಗ್‌ 36ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.