ADVERTISEMENT

ಕ್ರಿಕೆಟ್‌: ‌ವಿಶಾಲ್, ಚಿನ್ಮಯ್ ಭರ್ಜರಿ ಶತಕ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 21:39 IST
Last Updated 13 ಡಿಸೆಂಬರ್ 2021, 21:39 IST

ಬೆಂಗಳೂರು: ವಿಶಾಲ್ ಒನಟ್‌ (ಬ್ಯಾಟಿಂಗ್‌ 170) ಹಾಗೂ ಚಿನ್ಮಯ್ ಎನ್‌.ಎ. (ಬ್ಯಾಟಿಂಗ್‌ 153) ಅವರ ಭರ್ಜರಿ ಶತಕ ಗಳಿಸಿದರು. ಅವರ ಆಟದ ನೆರವಿನಿಂದ ಕರ್ನಾಟಕ ತಂಡವು ಕೂಚ್‌ ಬೆಹಾರ್ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್ ಪಂದ್ಯದಲ್ಲಿ ಉತ್ತಮ ಮೊತ್ತ ಗಳಿಸಿತು.

ಆಂಧ್ರಪ್ರದೇಶದ ವಿಜಯನಗರಂನ ಕಂದುಕೂರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನ ಕರ್ನಾಟಕ ತಂಡವು ಬರೋಡಾ ಎದುರು 90 ಓವರ್‌ಗಳಲ್ಲಿ 3 ವಿಕೆಟ್‌ಗೆ 356 ರನ್‌ ಗಳಿಸಿತು. 280 ಎಸೆತಗಳನ್ನು ಎದುರಿಸಿದ ವಿಶಾಲ್‌ 26 ಬೌಂಡರಿ ಒಂದು ಸಿಕ್ಸರ್‌ ಹೊಡೆದರೆ, ಚಿನ್ಮಯ್‌ ಅವರ 236 ಎಸೆತಗಳಲ್ಲಿ ಇನಿಂಗ್ಸ್‌ನಲ್ಲಿ 23 ಬೌಂಡರಿಗಳಿದ್ದವು.

ಸಂಕ್ಷಿಪ್ತ ಸ್ಕೋರ್‌
ಕರ್ನಾಟಕ: ಮೊದಲ ಇನಿಂಗ್ಸ್:
90 ಓವರ್‌ಗಳಲ್ಲಿ 3ಕ್ಕೆ 356 (ವಿಶಾಲ್ ಒನಟ್‌ ಬ್ಯಾಟಿಂಗ್‌ 170, ಸ್ಮರಣ್ ಆರ್‌. 22, ಚಿನ್ಮಯ್‌ ಎನ್‌.ಎ. ಬ್ಯಾಟಿಂಗ್‌ 153, ಕರಣ್‌ ಉಮತ್ತ್ 60ಕ್ಕೆ 2). ಬರೋಡಾ ಎದುರಿನ ಪಂದ್ಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.