ADVERTISEMENT

ಕೋವಿಡ್ ಪರಿಣಾಮ: ವಾರ್ಷಿಕ ಸಭೆ ಬದಲು ಕಾಲ್‌ ಕಾನ್ಫರೆನ್ಸ್‌ ನಡೆಸಲಿದೆ ಐಸಿಸಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 12:29 IST
Last Updated 13 ಮಾರ್ಚ್ 2020, 12:29 IST
   

ದುಬೈ:ಮಾರ್ಚ್‌ 26–29ರವರೆಗೆ ದುಬೈನಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಮಂಡಳಿಯ ವಾರ್ಷಿಕ ಸಭೆ ಬದಲಾಗಿ ಕಾಲ್‌ ಕಾನ್ಫರೆನ್ಸ್‌ ನಡೆಸಲು ಐಸಿಸಿ ನಿರ್ಧರಿಸಿದೆ.ಜಗತ್ತಿನಾದ್ಯಂತ ಆತಂಕ ಉಂಟುಮಾಡಿರುವ ಕೋವಿಡ್–19 ವೈರಸ್‌ ಭೀತಿಯಿಂದಾಗಿ ಈ ತೀರ್ಮಾನಕೈಗೊಳ್ಳಲಾಗಿದೆ.

‘ಕೋವಿಡ್‌–19 ಸೋಂಕು ಹರಡುವಿಕೆ ಮುಂದುವರಿದಿದೆ. ಈ ಸಂಬಂಧ ಸದಸ್ಯರು ಕಳವಳ ವ್ಯಕ್ತಪಡಿಸಿರುವುದು, ವೈರಸ್‌ ವಿರುದ್ಧ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರ ಅಗತ್ಯತೆಯನ್ನು ಸಾರಿದೆ. ಹಾಗಾಗಿ, ಮಾರ್ಚ್‌ ಅಂತ್ಯದಲ್ಲಿದುಬೈನಲ್ಲಿ ನಡೆಸಲು ಉದ್ದೇಶಿಸಿದ್ದ ಸಭೆಯ ಬದಲು ಕಾಲ್‌ ಕಾನ್ಫರೆನ್ಸ್‌ ನಡೆಸಲು ನಿರ್ಧರಿಸಲಾಗಿದೆ’ ಎಂದು ಐಸಿಸಿ ಪ್ರಕಟಣೆ ಹೊರಡಿಸಿದೆ.

‘ತುರ್ತು ಸಂದರ್ಭಗಳನ್ನು ಹೊರತುಪಡಿಸಿ, ವಿವಿಧ ಸಮಿತಿಗಳನ್ನೊಳಗೊಂಡ ಪೂರ್ಣಪ್ರಮಾಣದಸಭೆಯನ್ನು ಮೇ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸಭೆಗಳ ವೇಳಾಪಟ್ಟಿಯನ್ನು ಮೇ ತಿಂಗಳಲ್ಲಿ ನಡೆಸಲು ಪರಿಶೀಲನೆ ನಡೆಸಲಾಗುವುದು’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.