ADVERTISEMENT

ಭಾರತ ‘ಎ’ ತಂಡಕ್ಕೆ ದೇವಿಕಾ ನಾಯಕಿ

ಪಿಟಿಐ
Published 10 ಸೆಪ್ಟೆಂಬರ್ 2019, 20:23 IST
Last Updated 10 ಸೆಪ್ಟೆಂಬರ್ 2019, 20:23 IST
ದೇವಿಕಾ ವೈದ್ಯ
ದೇವಿಕಾ ವೈದ್ಯ   

ನವದೆಹಲಿ: ಬಾಂಗ್ಲಾದೇಶ ಪ್ರವಾಸ ಹಾಗೂ ಏಷ್ಯಾಕಪ್‌ ಟೂರ್ನಿಗೆ ಭಾರತ ‘ಎ’ ಕ್ರಿಕೆಟ್‌ ತಂಡವನ್ನು ಪ್ರಕಟಿಸಲಾಗಿದೆ. ಆಲ್‌ರೌಂಡರ್‌ ದೇವಿಕಾ ವೈದ್ಯ ತಂಡವನ್ನು ಮುನ್ನಡೆಸಲಿದ್ದಾರೆ.

ಬಾಂಗ್ಲಾದೇಶದಲ್ಲಿ ಭಾರತ ಎ ತಂಡ ಮೂರು ಏಕದಿನ ಪಂದ್ಯಗಳು ಹಾಗೂ ಮೂರು ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ.

ಏಷ್ಯಾಕಪ್‌ ಟೂರ್ನಿಯು ಶ್ರೀಲಂಕಾದಲ್ಲಿ ನಡೆಯಲಿದೆ.

ADVERTISEMENT

ತಂಡ ಇಂತಿದೆ: ದೇವಿಕಾ ವೈದ್ಯ (ನಾಯಕಿ), ಎಸ್‌, ಮೇಘನಾ (ಉಪನಾಯಕಿ), ಯಾಸ್ತಿಕಾ ಭಾಟಿಯಾ, ತೇಜಲ್‌ ಹಸಬ್ನಿಸ್‌, ತನುಶ್ರೀ ಸರ್ಕಾರ್‌, ಸಿಮ್ರನ್‌ ದಿಲ್ ಬಹದ್ದೂರ್‌, ನುಜತ್‌ ಪರ್ವೀನ್‌, ಆರ್‌. ಕಲ್ಪನಾ, ಮನಾಲಿ ದಕ್ಷಿಣಿ, ಕ್ಷಮಾ ಸಿಂಗ್‌, ಅಂಜಲಿ ಸರ್ವಾನಿ, ಮಿನ್ನು ಮಣಿ, ಸುಶ್ರೀ ದಿವ್ಯದರ್ಶಿನಿ, ಟಿ.ಪಿ. ಕನ್ವರ್‌, ರಾಶಿ ಕನೋಜಿಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.