ADVERTISEMENT

ವಿಶ್ವಕಪ್‌ ಕ್ರಿಕೆಟ್‌: ದ್ವಿಶತಕ ಪೂರೈಸಿದ ಇಂಗ್ಲೆಂಡ್‌

​ಪ್ರಜಾವಾಣಿ ವಾರ್ತೆ
Published 30 ಮೇ 2019, 12:14 IST
Last Updated 30 ಮೇ 2019, 12:14 IST
ಇಂಗ್ಲೆಂಡ್‌ ತಂಡದ ಜೇಸನ್‌ ರಾಯ್‌ ಬ್ಯಾಟಿಂಗ್‌ ವೈಖರಿ –ಎಎಫ್‌ಪಿ ಚಿತ್ರ
ಇಂಗ್ಲೆಂಡ್‌ ತಂಡದ ಜೇಸನ್‌ ರಾಯ್‌ ಬ್ಯಾಟಿಂಗ್‌ ವೈಖರಿ –ಎಎಫ್‌ಪಿ ಚಿತ್ರ   

ಲಂಡನ್‌ (ಪಿಟಿಐ): ಇಂಗ್ಲೆಂಡ್‌ ತಂಡವು ದಕ್ಷಿಣ ಆಫ್ರಿಕಾ ಎದುರಿನ ವಿಶ್ವಕಪ್‌ ಉದ್ಘಾಟನಾ ಪಂದ್ಯದಲ್ಲಿ ದ್ವಿಶತಕ ಪೂರೈಸಿದೆ.

ಏಯೊನ್‌ ಮಾರ್ಗನ್‌ ಬಳಗವು 35 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಇನ್ನೂರರ ಗಡಿ ಮುಟ್ಟಿದೆ.

ಜೇಸನ್ ರಾಯ್‌ ಅವರು ಈ ಸಲದ ವಿಶ್ವಕಪ್‌ನಲ್ಲಿ ಅರ್ಧಶತಕ ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ಹಿರಿಮೆಗೆ ಭಾಜನರಾದರು. 53 ಎಸೆತಗಳನ್ನು ಎದುರಿಸಿದ ಅವರು 8 ಬೌಂಡರಿ ಸಹಿತ 54ರನ್‌ ಬಾರಿಸಿ ಆ್ಯಂಡಿಲೆ ಪಿಶುವಾಯೊಗೆ ವಿಕೆಟ್‌ ನೀಡಿದರು.

ADVERTISEMENT

ಈ ಸಲದ ವಿಶ್ವಕಪ್‌ನ ಮೊದಲ ವಿಕೆಟ್‌ ಇಮ್ರಾನ್‌ ತಾಹೀರ್‌ ಖಾತೆಗೆ ಸೇರ್ಪಡೆಯಾಯಿತು. ಇನಿಂಗ್ಸ್‌ನ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಅವರು ಜಾನಿ ಬೇಸ್ಟೊ (0) ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.

ಇಂಗ್ಲೆಂಡ್‌ನ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಜೋ ರೂಟ್‌ (51; 59ಎ, 5ಬೌಂ) ಕೂಡಾ ಅರ್ಧಶತಕದ ಸಂಭ್ರಮ ಆಚರಿಸಿದರು.

ನಾಯಕ ಮಾರ್ಗನ್‌ (ಬ್ಯಾಟಿಂಗ್‌ 54; 57ಎ, 4ಬೌಂ, 3ಸಿ) ಮತ್ತು ಬೆನ್‌ ಸ್ಟೋಕ್ಸ್‌ (ಬ್ಯಾಟಿಂಗ್‌ 50; 46ಎ, 6ಬೌಂ) ಮುರಿಯದ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 102ರನ್‌ ಸೇರಿಸಿ ತಂಡದ ಮೊತ್ತ ಹೆಚ್ಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.