ADVERTISEMENT

ಕ್ರಿಕೆಟ್‌: ಆಕಾಶ್‌ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 19:45 IST
Last Updated 25 ಫೆಬ್ರುವರಿ 2020, 19:45 IST

ಬೆಂಗಳೂರು: ಆಕಾಶ್‌ (85) ಅರ್ಧಶತಕ ಮತ್ತು ವೇದ್‌ (10ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಮಲ್ಯ ಅದಿತಿ ಇಂಟರ್‌ನ್ಯಾಷನಲ್‌ ಶಾಲೆ ತಂಡ ಬಿಟಿಆರ್‌ ಶೀಲ್ಡ್‌ಗಾಗಿ ನಡೆಯುತ್ತಿರುವ 14 ವರ್ಷದೊಳಗಿನವರ ಗುಂಪು–1, ಡಿವಿಷನ್‌–2 ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದೆ.

ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಮಲ್ಯ ಅದಿತಿ ಶಾಲೆ 118ರನ್‌ಗಳಿಂದ ಕೋಲಾರದ ಶ್ರೀ ಆರ್‌.ವಿ.ಶಾಲೆಯನ್ನು ಮಣಿಸಿತು.

ಸಂಕ್ಷಿಪ್ತ ಸ್ಕೋರ್‌: ಮಲ್ಯ ಅದಿತಿ ಶಾಲೆ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 222 (ಡಿ.ಅನ್ವಯ್‌ 24, ಆಕಾಶ್‌ 85, ಎಸ್‌.ಅಗಸ್ತ್ಯ 46, ದಯಾನ್‌ 40; ಮೋನಿಷ್‌ 51ಕ್ಕೆ3).

ADVERTISEMENT

ಶ್ರೀ ಆರ್‌.ವಿ.ಶಾಲೆ, ಕೋಲಾರ: 36 ಓವರ್‌ಗಳಲ್ಲಿ 104 (ರಾಹುಲ್‌ ರಾಮ್‌ ಔಟಾಗದೆ 43; ಇಶಾನ್‌ 10ಕ್ಕೆ2, ವೇದ್‌ 10ಕ್ಕೆ3, ದಯಾನ್‌ 24ಕ್ಕೆ2) ಫಲಿತಾಂಶ: ಮಲ್ಯ ಅದಿತಿ ಶಾಲೆಗೆ 118ರನ್‌ ಗೆಲುವು.

ಸೇಂಟ್‌ ಫ್ರಾನ್ಸಿಸ್‌ ಶಾಲೆ, ಐಸಿಎಸ್‌ಇ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 158 (ಎನ್‌.ಪ್ರತೀಕ್‌ 36, ಚಿರಾಗ್‌ ಔಟಾಗದೆ 30; ಕರುಣ್‌ ಆನಂದ್‌ 37ಕ್ಕೆ2, ಸಾಯಿ ಮಿಧುಷ್‌ 23ಕ್ಕೆ2, ಅರ್ಣವ್‌ ಮಿಶ್ರಾ 21ಕ್ಕೆ3).

ಬಿಜಿಎಸ್‌ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌: 42.4 ಓವರ್‌ಗಳಲ್ಲಿ 4 ವಿಕೆಟ್‌ಗೆ 161 (ಅರ್ಣವ್‌ ಮಿಶ್ರಾ 62, ಆದಿತ್ಯ ಅಗರವಾಲ್‌ 31, ವಿ.ಕಾರ್ತಿಕೇಯನ್‌ ಔಟಾಗದೆ 21, ಕರುಣ್‌ ಆನಂದ್‌ ಔಟಾಗದೆ 30; ಅನೀಶ್‌ 22ಕ್ಕೆ2). ಫಲಿತಾಂಶ: ಬಿಜಿಎಸ್‌ ನ್ಯಾಷನಲ್‌ ಸ್ಕೂಲ್‌ಗೆ 6 ವಿಕೆಟ್‌ಗೆ ಗೆಲುವು ಹಾಗೂ ಫೈನಲ್‌ ಪ್ರವೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.