ADVERTISEMENT

ಒರಟು ನಡವಳಿಕೆಗೆ ಶಿಕ್ಷೆ: ಐಸಿಸಿ ಸಿಇಒ ಮನು ಸವಾನಿಗೆ ರಜೆ

ಪಿಟಿಐ
Published 10 ಮಾರ್ಚ್ 2021, 19:31 IST
Last Updated 10 ಮಾರ್ಚ್ 2021, 19:31 IST
ಮನು ಸವಾನಿ
ಮನು ಸವಾನಿ   

ನವದೆಹಲಿ: ಸಹೋದ್ಯೋಗಿಗಳೊಂದಿಗೆ ಒರಟು ನಡವಳಿಕೆ ತೋರಿದ ಆರೋಪದ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್ (ಐಸಿಸಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನು ಸವಾನಿ ಅವರನ್ನು ರಜೆ ಮೇಲೆ ಕಳಿಸಲಾಗಿದೆ. ಈ ಪ್ರಕರಣದಿಂದಾಗಿ ಅವರು ತಮ್ಮ ಅವಧಿ ಪೂರೈಸುವ ಮುನ್ನವೆ ಸ್ಥಾನ ಬಿಡಬೇಕಾದ ಸಾಧ್ಯತೆಯೂ ಇದೆ ಎನ್ನಲಾಗಿದೆ.

’ಐಸಿಸಿಯ ಸಿಬ್ಬಂದಿ ಮತ್ತು ಕೆಲವು ಮಹತ್ವದ ಹುದ್ದೆಗಳಲ್ಲಿರುವ ಉದ್ಯೋಗಿಗಳು ಮನು ಅವರ ಒರಟು ನಡವಳಿಕೆಯ ಕುರಿತು ದೂರಿದ್ದಾರೆ. ಆದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ‘ ಎಂದು ಐಸಿಸಿ ಮೂಲಗಳು ತಿಳಿಸಿವೆ.

56 ವರ್ಷದ ಮನು ಮಂಗಳವಾರ ಕಚೇರಿಗೆ ಬಂದಿದ್ದರು. ಕೆಲಹೊತ್ತಿನ ನಂತರ ಅವರನ್ನು ರಜೆ ಮೇಲೆ ಕಳಿಸಲಾಯಿತು. ಡೇವ್ ರಿಚರ್ಡ್ಸನ್ ಅವರ ನಿರ್ಗಮನದಿಂದಾಗಿ ತೆರವಾಗಿದ್ದ ಸಿಇಒ ಹುದ್ದೆಗೆ 2019ರ ವಿಶ್ವಕಪ್ ನಂತರ ಐಸಿಸಿಗೆ ಸಿಇಒ ಆಗಿ ಮನು ನೇಮಕವಾಗಿದ್ದರು. 2022ರವರೆಗೂ ಅವರ ಕಾರ್ಯಾವಧಿ ಇದೆ.

ADVERTISEMENT

‘ಕೆಲವು ಕ್ರಿಕೆಟ್ ಮಂಡಳಿಗಳಿಗೂ ಮನು ಅವರ ಕಾರ್ಯವೈಖರಿಯ ಬಗ್ಗೆ ಅತೃಪ್ತಿ ಇತ್ತು‘ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.