ADVERTISEMENT

ಇಂಟರ್‌ಪೋಲ್‌ ಜತೆ ಕೈಜೋಡಿಸಿದ ಐಸಿಸಿ

ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ

ರಾಯಿಟರ್ಸ್
Published 3 ಏಪ್ರಿಲ್ 2019, 20:40 IST
Last Updated 3 ಏಪ್ರಿಲ್ 2019, 20:40 IST
ಐಸಿಸಿ
ಐಸಿಸಿ   

ನವದೆಹಲಿ: ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ‍ಪ್ರಯತ್ನದ ಭಾಗವಾಗಿ ಇಂಟರ್‌ಪೋಲ್‌ ಜೊತೆ ಕೈಜೋಡಿಸಲು ಅಂತರ ರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ನಿರ್ಧರಿಸಿದೆ.

ಐಸಿಸಿಯ ಭ್ರಷ್ಟಾಚಾರ ನಿಗ್ರಹ ಘಟಕದ ಜನರಲ್‌ ಮ್ಯಾನೇಜರ್‌ ಅಲೆಕ್ಸ್ ಮಾರ್ಷಲ್‌ ಕಳೆದ ವಾರ ಇಂಟರ್‌ ಪೋಲ್‌ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿದರು.

‘ವಿವಿಧ ದೇಶಗಳ ಕಾನೂನು ಸಂಸ್ಥೆಗಳ ಜೊತೆಗೆ ಐಸಿಸಿ ಅತ್ಯಂತ ನಿಕಟ ಸಂಬಂಧ ಹೊಂದಿದೆ. ಇಂಟರ್‌ ಪೋಲ್‌ನಿಂದ 194 ಸದಸ್ಯರಾಷ್ಟ್ರಗಳ ಜೊತೆಗೂ ಸಂ‍ಪರ್ಕ ಹೊಂದಿದಂತೆ ಆಗುತ್ತದೆ’ ಎಂದು ಮಾರ್ಷಲ್‌ ಅವರು ತಿಳಿಸಿದ್ದಾರೆ.

ADVERTISEMENT

‘ಜಾಗೃತಿ ಮೂಡಿಸುವುದು ಹಾಗೂ ಭ್ರಷ್ಟಾಚಾರದಿಂದ ದೂರವುಳಿಯುವಂತೆ ಮಾಡುವುದು ನಮ್ಮ ಗುರಿ. ಅಪರಾಧಗಳು ನಡೆದಿ ರುವುದು ಸಾಬೀತಾದರೆ ಸಂಬಂಧಪಟ್ಟ ತನಿಖೆ ಸಂಸ್ಥೆಗಳಿಗೆ ಮಾಹಿತಿ ನೀಡುತ್ತೇವೆ. ಈ ನಿಟ್ಟಿನಲ್ಲಿ ಇಂಟರ್‌ಪೋಲ್‌ ಅತ್ಯಂತ ಮಹತ್ವದ ಪಾಲುದಾರಿಕೆ ಹೊಂದಲಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.