ADVERTISEMENT

ಬಿದಿರಿನ ಬ್ಯಾಟ್ ಬಳಕೆ ನಿಯಮಬಾಹಿರ: ಎಂಸಿಸಿ

ಪಿಟಿಐ
Published 11 ಮೇ 2021, 16:38 IST
Last Updated 11 ಮೇ 2021, 16:38 IST
ಬಿದಿರು ಬ್ಯಾಟ್‌ನೊಂದಿಗೆ ದರ್ಶಿಲ್ ಶಾ  –ಎಎಫ್‌ಪಿ ಚಿತ್ರ
ಬಿದಿರು ಬ್ಯಾಟ್‌ನೊಂದಿಗೆ ದರ್ಶಿಲ್ ಶಾ  –ಎಎಫ್‌ಪಿ ಚಿತ್ರ   

ಲಂಡನ್: ಕ್ರಿಕೆಟ್‌ನಲ್ಲಿ ಬಿದಿರಿನಿಂದ ತಯಾರಿಸಿದ ಬ್ಯಾಟ್‌ಗಳನ್ನು ಬಳಸುವುದು ನಿಯಮಬಾಹಿರಎಂದು ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ತಿಳಿಸಿದೆ.

ಕೆಂಬ್ರಿಜ್ ವಿಶ್ವವಿದ್ಯಾಲಯದ ದರ್ಶಿಲ್ ಶಾ ಮತ್ತು ಬೆನ್ ಟಿಕ್ಲರ್–ಡೆವಿಸ್ ಅವರು ಸಂಶೋನೆ ಮಾಡಿ, ಬಂಬೂ ಬ್ಯಾಟ್‌ಗಳು ಸಾಂಪ್ರದಾಯಿಕ ಬ್ಯಾಟ್‌ಗಳಿಗಿಂತ ಕಡಿಮೆ ಬೆಲೆಯುಳ್ಳವು ಮತ್ತು ಗುಣಮಟ್ಟದಲ್ಲಿ ಉತ್ತಮವಾಗಿರುತ್ತವೆ. ಆದ್ದರಿಂದ ವಿಲ್ಲೊ ಬ್ಯಾಟ್‌ಗಳಿಗಿಂತ ಇದನ್ನೇ ಬಳಸಬಹುದು ಎಂದು ಶಿಫಾರಸು ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಎಂಸಿಸಿ, ‘ಕ್ರಿಕೆಟ್‌ ನಿಯಮ 5.3.3ರ ಪ್ರಕಾರ ಕಟ್ಟಿಗೆ ಅಥವಾ ಮರದಿಂದ ತಯಾರಿಸಿದ ಬ್ಯಾಟ್‌ಗಳನ್ನೇ ಬಳಸಬೇಕು. ಬಿದಿರು ಹುಲ್ಲು ಜಾತಿಯದ್ದು. ಆದ್ದರಿಂದ ಅದು ಕಟ್ಟಿಗೆಯಲ್ಲ. ಒಂದೊಮ್ಮೆ ಬಿದಿರು ಬ್ಯಾಟ್‌ ಬಳಸಬೇಕಾದರೆ ನಿಯಮ ತಿದ್ದುಪಡಿ ಅಗತ್ಯವಿದೆ‘ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.