ADVERTISEMENT

ಆಸ್ಟ್ರೇಲಿಯಾಕ್ಕೆ ಮಾರ್ಷ್, ಮ್ಯಾಕ್ಸ್‌ವೆಲ್ ಆಸರೆ

ಕ್ರಿಕೆಟ್: ಜೋಫ್ರಾ ಆರ್ಚರ್, ಮಾರ್ಕ್‌ ವುಡ್‌ಗೆ ತಲಾ ಮೂರು ವಿಕೆಟ್

ಏಜೆನ್ಸೀಸ್
Published 11 ಸೆಪ್ಟೆಂಬರ್ 2020, 17:55 IST
Last Updated 11 ಸೆಪ್ಟೆಂಬರ್ 2020, 17:55 IST
ಗ್ಲೆನ್ ಮ್ಯಾಕ್ಸ್‌ವೆಲ್ ಆಟದ ವೈಖರಿ  –ರಾಯಿಟರ್ಸ್ ಚಿತ್ರ
ಗ್ಲೆನ್ ಮ್ಯಾಕ್ಸ್‌ವೆಲ್ ಆಟದ ವೈಖರಿ  –ರಾಯಿಟರ್ಸ್ ಚಿತ್ರ   

ಮ್ಯಾಂಚೆಸ್ಟರ್: ಮಧ್ಯಮಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಮಿಚೆಲ್ ಮಾರ್ಷ್‌ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಶುಕ್ರವಾರ ಓಲ್ಡ್ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಅರ್ಧಶತಕಗಳ ಮಿಂಚು ಹರಿಸಿದರು. ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ಆಸರೆಯಾದರು.

ಮಾರ್ಷ್ (73; 100ಎಸೆತ, 6ಬೌಂಡರಿ) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (77; 59ಎ, 4ಬೌಂ, 4ಸಿ) ಅವರ ಆಟದ ಬಲದಿಂದ ತಂಡವು 50 ಓವರ್‌ಗಳಲ್ಲಿ 8ಕ್ಕೆ 294 ರನ್‌ ಗಳಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡವು ಆರಂಭದಲ್ಲಿಯೇ ಪೆಟ್ಟು ನೀಡಿತು. 15.2 ಓವರ್‌ಗಳಲ್ಲಿ 80 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಆಸ್ಟ್ರೇಲಿಯಾ ಕಳೆದುಕೊಡಿತು. ಮಾರ್ಕಸ್ ಸ್ಟೋಯಿನಿಸ್ ಸ್ವಲ್ಪ ಹೋರಾಟ ತೋರಿದರು. ಅವರು ಔಟಾದ ನಂತರ ಮಾರ್ಷ್ ತಾಳ್ಮೆಯಿಂದ ಆಡಿದರು.

ADVERTISEMENT

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 9ಕ್ಕೆ 294 (ಮಾರ್ಕಸ್ ಸ್ಟೋಯಿನಿಸ್ 43, ಮಿಷೆಲ್ ಮಾರ್ಷ್ 43, ಮಿಚೆಲ್ ಮಾರ್ಷ್ 73, ಗ್ಲೆನ್ ಮ್ಯಾಕ್ಸ್‌ವೆಲ್ 77, ಜೋಫ್ರಾ ಆರ್ಚರ್ 57ಕ್ಕೆ3, ಮಾರ್ಕ್ ವುಡ್ 54ಕ್ಕೆ3, ಆದಿಲ್ ರಶೀದ್ 55ಕ್ಕೆ2) ಇಂಗ್ಲೆಂಡ್ ವಿರುದ್ಧದ ಪಂದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.