ADVERTISEMENT

ದಕ್ಷಿಣ ಆಫ್ರಿಕಾ ಆಟಗಾರರಿಗೆ ವೇತನ ಕಡಿತವಿಲ್ಲ

ರಾಯಿಟರ್ಸ್
Published 31 ಮಾರ್ಚ್ 2020, 20:00 IST
Last Updated 31 ಮಾರ್ಚ್ 2020, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೇಪ್‌ಟೌನ್: ದಕ್ಷಿಣ ಆಫ್ರಿಕಾ ತಂಡದ ಕ್ರಿಕೆಟ್‌ ಆಟಗಾರರಿಗೆ 2020–21ನೇ ಸಾಲಿನ ವೇತನದಲ್ಲಿ ಕಡಿತ ಮಾಡುವುದಿಲ್ಲ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾಕಸ್ ಫಾಲ್ ತಿಳಿಸಿದ್ದಾರೆ.

‘ವಾರ್ಷಿಕ ಗುತ್ತಿಗೆಯಲ್ಲಿರುವ ಆಟಗಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ. ನಮ್ಮ ವೇಳಾಪಟ್ಟಿಯೂ ಹೆಚ್ಚು ಅಸ್ತವ್ಯಸ್ತವಾಗುವುದಿಲ್ಲ. ನಾವು ಈಗಾಗಲೇ ಬಜೆಟ್ ಸಿದ್ಧಪಡಿಸಿದಂತೆಯೇ ನಿರ್ವಹಿಸಲು ಶಕ್ತರಾಗಿದ್ದೇವೆ. ನಮ್ಮದು ಕೇಂದ್ರಿಕೃತ ವ್ಯವಸ್ಥೆಯಾಗಿದೆ. ರಾಷ್ಟ್ರೀಯ ಮತ್ತು ಫ್ರ್ಯಾಂಚೈಸ್‌ಗಳ ಆಟಗಾರರಿಗೆ ಯಾವುದೇ ಕಡಿತದ ಭೀತಿ ಇಲ್ಲ’ ಎಂದು ಮಂಗಳವಾರ ಫಾಲ್ ತಿಳಿಸಿದ್ದಾರೆ.

ಬಾಂಗ್ಲಾ ಆಟಗಾರ್ತಿಯರಿಗೆ ಭತ್ಯೆ (ಪಿಟಿಐ): ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ತನ್ನ ದೇಶದ ತಂಡದ ಆಟಗಾರ್ತಿಯರಿಗೆ ಭತ್ಯೆಯನ್ನು ಮಂಜೂರು ಮಾಡಿದೆ. 20 ಸಾವಿರ ಟಕಾವನ್ನು ಒಂದು ಸಲ ಪಾವತಿಸಲಾಗುವುದು ಎಂದು ಮಂಡಳಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.