ADVERTISEMENT

ಕ್ರಿಕೆಟ್‌: ಸೂರಜ್‌ಗೆ ಏಳು ವಿಕೆಟ್‌

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 19:45 IST
Last Updated 23 ಆಗಸ್ಟ್ 2019, 19:45 IST

ಬೆಂಗಳೂರು: ಸೂರಜ್‌ (27ಕ್ಕೆ7) ಅವರ ಅಮೋಘ ಬೌಲಿಂಗ್‌ ಬಲದಿಂದ ದಿ ಬೆಂಗಳೂರು ಕ್ರಿಕೆಟರ್ಸ್‌ ತಂಡವು ವೈ.ಎಸ್‌.ರಾಮಸ್ವಾಮಿ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಎಸ್‌.ಜೆ.ಸರ್ಕಾರಿ ಪಾಲಿಟೆಕ್ನಿಕ್‌ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಜಯಭೇರಿ ಮೊಳಗಿಸಿದೆ.

ಹಾಸನ ಕೋಲ್ಟ್ಸ್‌ ತಂಡ ಕೂಡ 10 ವಿಕೆಟ್‌ಗಳಿಂದ ಕಲಬುರ್ಗಿಯ ಕಾಸ್ಮಸ್‌ ಕ್ಲಬ್‌ ಎದುರು ಗೆದ್ದಿದೆ. ಹಾಸನ ತಂಡದ ಸಾಗರ್‌ (ಔಟಾಗದೆ 100) ಶತಕದ ಸಂಭ್ರಮ ಆಚರಿಸಿದರು.

ಸಂಕ್ಷಿಪ್ತ ಸ್ಕೋರ್‌: ಎಸ್‌.ಜೆ.ಸರ್ಕಾರಿ ಪಾಲಿಟೆಕ್ನಿಕ್‌: 24.5 ಓವರ್‌ಗಳಲ್ಲಿ 82 (ಸೂರಜ್‌ 27ಕ್ಕೆ7). ದಿ ಬೆಂಗಳೂರು ಕ್ರಿಕೆಟರ್ಸ್‌: 10 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 84 (ನಿನಾದ್‌ ಔಟಾಗದೆ 33, ಶ್ರೇಯಸ್‌ ಔಟಾಗದೆ 37). ಫಲಿತಾಂಶ: ಬೆಂಗಳೂರು ಕ್ರಿಕೆಟರ್ಸ್‌ಗೆ 10 ವಿಕೆಟ್‌ ಗೆಲುವು.

ADVERTISEMENT

ಕಾಸ್ಮಸ್‌ ಕ್ಲಬ್‌: 43.2 ಓವರ್‌ಗಳಲ್ಲಿ 143 (ನಿತೇಶ್‌ 37, ಶಶಾಂಕ್‌ 38, ಮಧುಸೂದನ್‌ 28; ಮನೋಜ್‌ 21ಕ್ಕೆ2, ಸಂದೇಶ್‌ 30ಕ್ಕೆ3). ಹಾಸನ್‌ ಕೋಲ್ಟ್ಸ್‌: 13 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 147 (ಸಾಗರ್‌ ಔಟಾಗದೆ 100, ಅಲೀಮ್‌ ಪಾಷಾ ಔಟಾಗದೆ 42). ಫಲಿತಾಂಶ: ಹಾಸನ್‌ ಕೋಲ್ಟ್ಸ್‌ಗೆ 10 ವಿಕೆಟ್‌ ಗೆಲುವು.

ಕೋಹಿನೂರ್‌ ಕ್ಲಬ್‌, ವಿಜಯಪುರ: 27.5 ಓವರ್‌ಗಳಲ್ಲಿ 102 (ಆರ್‌.ಶ್ರೀಕಾಂತ್‌ ಔಟಾಗದೆ 43; ಶೈಲೇಶ್‌ 16ಕ್ಕೆ2, ಎಸ್‌.ಅಭಿಷೇಕ್‌ 46ಕ್ಕೆ5). ಮಾಡರ್ನ್‌ ಕ್ರಿಕೆಟರ್ಸ್‌: 20.4 ಓವರ್‌ಗಳಲ್ಲಿ 6 ವಿಕೆಟ್‌ಗೆ 103 (ಶೈಲೇಶ್‌ 35; ಪಿ.ವಿನಾಯಕ್‌ 19ಕ್ಕೆ2). ಫಲಿತಾಂಶ: ಮಾಡರ್ನ್‌ ಕ್ರಿಕೆಟರ್ಸ್‌ಗೆ 4 ವಿಕೆಟ್‌ ಗೆಲುವು.

ಸ್ಪಾರ್ಟನ್ಸ್‌ ಸ್ಪೋರ್ಟ್ಸ್‌ ಕ್ಲಬ್‌: 41.1 ಓವರ್‌ಗಳಲ್ಲಿ 147 (ಅಭಿನವ್‌ ರಾಯ್‌ 45, ಸ್ಮಯನ್‌ ಔಟಾಗದೆ 23; ಪ್ರವೀಣ್‌ ಕುಮಾರ್‌ 37ಕ್ಕೆ2, ಪರಸ್‌ ಗುರುಬಕ್ಷ್‌ ಆರ್ಯ 22ಕ್ಕೆ2). ಬೆಂಗಳೂರು ಅಕೇಷನಲ್ಸ್‌ 30.3 ಓವರ್‌ಗಳಲ್ಲಿ 124 (ಜಸ್ಪರ್‌ 41, ರೋಹಿತ್‌ 33; ಸ್ಮಯನ್‌ 23ಕ್ಕೆ3, ಭಾರ್ಗವ 40ಕ್ಕೆ3). ಫಲಿತಾಂಶ: ಸ್ಪಾರ್ಟನ್ಸ್‌ಗೆ 23ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.