ADVERTISEMENT

ಸೂಪರ್ ಕಿಂಗ್ಸ್‌ಗೆ ಎರಡನೇ ಪರೀಕ್ಷೆ: ಶುಕ್ರವಾರದಿಂದ ಶಿಬಿರ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 15:45 IST
Last Updated 3 ಸೆಪ್ಟೆಂಬರ್ 2020, 15:45 IST
ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಆಟಗಾರರು (ಪ್ರಾತಿನಿಧಿಕ ಚಿತ್ರ)
ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಆಟಗಾರರು (ಪ್ರಾತಿನಿಧಿಕ ಚಿತ್ರ)   

ದುಬೈ: ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಕೋವಿಡ್ –19 ಸೋಂಕಿತ ಇಬ್ಬರು ಆಟಗಾರರನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಎರಡನೇ ಪರೀಕ್ಷೆಯನ್ನು ಗುರುವಾರ ನಡೆಸಲಾಯಿತು.

ಒಂದೊಮ್ಮೆ ಎಲ್ಲರ ವರದಿಗಳೂ ನೆಗೆಟಿವ್ ಬಂದರೆ ಶುಕ್ರವಾರದಿಂದ ಅಭ್ಯಾಸ ಆರಂಭಿಸುವ ಸಾಧ್ಯತೆ ಇದೆ.

ಮಧ್ಯಮವೇಗಿ ದೀಪಕ್ ಚಾಹಲ್ ಮತ್ತು ಇನ್ನೊಬ್ಬ ಆಟಗಾರ ಸೋಂಕಿಗೊಳಗಾಗಿದ್ದಾರೆ. ಅವರನ್ನು ಪ್ರತ್ಯೇಕವಾಸದಲ್ಲಿಡಲಾಗಿದೆ. ತಂಡದ ನೆರವು ಸಿಬ್ಬಂದಿ ಸೇರಿಂದತೆ ಒಟ್ಟು 13 ಮಂದಿಗೆ ಸೋಂಕು ತಗುಲಿದೆ.

ADVERTISEMENT

‘ಇವತ್ತು (ಗುರುವಾರ) ಪರೀಕ್ಷೆ ಆಗಿದೆ. ರಾತ್ರಿ ಅಥವಾ ಶುಕ್ರವಾರ ಬೆಳಿಗ್ಗೆ ಫಲಿತಾಂಶದ ವರದಿ ಬರಬಹುದು. ನಂತರ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಸಿಎಸ್‌ಕೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.