ADVERTISEMENT

ಬಾಂಗ್ಲಾ ವಿರುದ್ಧ ವಿಂಡೀಸ್‌ ತಂಡ ಎರಡು ಟೆಸ್ಟ್ ಆಡುವ ಸಾಧ್ಯತೆ

ಪಿಟಿಐ
Published 23 ನವೆಂಬರ್ 2020, 14:21 IST
Last Updated 23 ನವೆಂಬರ್ 2020, 14:21 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಢಾಕಾ: ಬಾಂಗ್ಲಾದೇಶ ತಂಡದ ವಿರುದ್ಧ ಮುಂದಿನ ವರ್ಷದ ಆರಂಭದಲ್ಲಿ ನಿಗದಿಯಾಗಿರುವ ಟೆಸ್ಟ್ ಪಂದ್ಯಗಳನ್ನು ಎರಡಕ್ಕೆ ಕಡಿತಗೊಳಿಸಬೇಕೆಂದು ವೆಸ್ಟ್ ಇಂಡೀಸ್ ಕ್ರಿಕೆಟ್‌ ಮಂಡಳಿ (ಸಿಡಬ್ಲ್ಯುಐ) ಅಪೇಕ್ಷೆ ಪಟ್ಟಿದೆ. ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಇರುವ ‘ಒತ್ತಡ‘ದಿಂದಾಗಿ ಮಂಡಳಿಯು ಈ ಚಿಂತನೆ ನಡೆಸಿದೆ.

ಬಾಂಗ್ಲಾದೇಶದಲ್ಲಿ ಆ ತಂಡದ ಎದುರು ಕೆರಿಬಿಯನ್‌ ಪಡೆ ಜನವರಿಯಲ್ಲಿ ತಲಾ ಮೂರು ಟೆಸ್ಟ್‌, ಏಕದಿನ ಹಾಗೂ ಎರಡು ಟ್ವೆಂಟಿ–20 ಪಂದ್ಯಗಳನ್ನು ಆಡಬೇಕಿದೆ. ಆದರೆ ಟೆಸ್ಟ್ ಪಂದ್ಯಗಳ ಸಂಖ್ಯೆಯನ್ನು ಕಡಿತ ಮಾಡಬೇಕೆಂದು ಬಯಸಿದೆ.

‘ಟೆಸ್ಟ್ ಪಂದ್ಯಗಳನ್ನು ಮೂರರಿಂದ ಎರಡಕ್ಕೆ ಇಳಿಸಬೇಕೆಂಬ ಆಯ್ಕೆ ಇದೆ. ಆದರೆ ಇದು ಇನ್ನೂ ಅಂತಿಮವಾಗಿಲ್ಲ. ಕೆಲವೇ ದಿನಗಳಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು‘ ಎಂದು ಸಿಡಬ್ಲ್ಯುಐ ಅಧ್ಯಕ್ಷ ರಿಕಿ ಸ್ಕೆರಿಟ್‌ ಹೇಳಿದ್ದಾರೆ.

ADVERTISEMENT

‘ಕೋವಿಡ್‌–19, ವೇಳಾಪಟ್ಟಿ ಹಾಗೂ ವೆಚ್ಚ ಸೇರಿದಂತೆ ಎಲ್ಲ ದೃಷ್ಟಿಕೋನಗಳ ಕಡೆಗೆ ನಾವು ಗಮನಹರಿಸಿದ್ದೇವೆ. ಕೊರೊನಾ ಹಾವಳಿಯಿಂದಾಗಿ ವಿಶ್ವ ಕ್ರಿಕೆಟ್‌ ಆದಾಯ ನಷ್ಟ ಅನುಭವಿಸುತ್ತಿದೆ. ಬಾಂಧವ್ಯವನ್ನು ಗೌರವಿಸುವ ದೃಷ್ಟಿಯಿಂದ ನಾವು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದ್ದೇವೆ‘ ಎಂದು ಅವರು ಹೇಳಿದ್ದಾರೆ.

ಕೋವಿಡ್‌ ಕಾರಣದಿಂದಲೇ ಬಾಂಗ್ಲಾದೇಶ ತಂಡವು ಮಾರ್ಚ್‌ನಿಂದ ಯಾವುದೇ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡಿಲ್ಲ.

ವೆಸ್ಟ್ ಇಂಡೀಸ್‌ ತಂಡ ಇಂಗ್ಲೆಂಡ್‌ ವಿರುದ್ಧದ ಸರಣಿಯ ಮೂಲಕ ಕೊರೊನಾ ಕಾಲದಲ್ಲಿ ಪ್ರವಾಸ ಕೈಗೊಂಡ ತಂಡಗಳಲ್ಲಿ ಒಂದು ಎನಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.