
ಕ್ರಿಕೆಟ್
(ಸಾಂಕೇತಿಕ ಚಿತ್ರ)
ಬೆಂಗಳೂರು: ಹರ್ವಿಕ್ ದೇಸಾಯಿ ಶತಕ (ಔಟಾಗದೇ 100, 116ಎ, 4X8, 6X2) ಮತ್ತು ಪ್ರೇರಕ್ ಮಂಕಡ್ ಆಲ್‌ರೌಂಡ್ (67; 66ಎ ಹಾಗೂ 47ಕ್ಕೆ2) ಅಟದ ಬಲದಿಂದ ಸೌರಾಷ್ಟ್ರ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು.
ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನ (2)ದಲ್ಲಿ ಸೋಮವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಸೌರಾಷ್ಟ್ರ ತಂಡವು ಉತ್ತರ ಪ್ರದೇಶ ಎದುರು ವಿಜೆಡಿ ನಿಯಮದನ್ವಯ 17 ರನ್‌ಗಳಿಂದ ಜಯಿಸಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಉತ್ತರ ಪ್ರದೇಶ ತಂಡವು ಅಭಿಷೇಕ್ ಗೋಸ್ವಾಮಿ (88; 82ಎ) ಮತ್ತು ಸಮೀರ್ ರಿಝ್ವಿ (ಔಟಾಗದೇ 88; 77ಎ, 4X10, 6X2) ಅವರ ಆಟದ ಬಲದಿಂದ 50 ಓವರ್‌ಗಳಲ್ಲಿ 8ಕ್ಕೆ310 ರನ್ ಗಳಿಸಿತು. ಇದಕ್ಕುತ್ತರವಾಗಿ ಸೌರಾಷ್ಟ್ರ ತಂಡವು 40.1 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 238 ರನ್ ಗಳಿಸಿತು. ಈ ಸಂದರ್ಭದಲ್ಲಿ ಮಳೆ ಸುರಿದ ಕಾರಣ ಪಂದ್ಯ ಸ್ಥಗಿತವಾಯಿತು. ವಿ.ಜಯದೇವನ್ ನಿಯಮದನ್ವಯ ಸೌರಾಷ್ಟ್ರ ತಂಡವು 17 ರನ್ ಮುನ್ನಡೆಯಲ್ಲಿತ್ತು. ಆದ್ದರಿಂದ ವಿಜಯೀ ಎಂದು ಘೋಷಿಸಲಾಯಿತು.
ಸಂಕ್ಷಿಪ್ತ ಸ್ಕೋರು: ಉತ್ತರಪ್ರದೇಶ: 50 ಓವರ್‌ಗಳಲ್ಲಿ 8ಕ್ಕೆ310 (ಅಭಿಷೇಕ್ ಗೋಸ್ವಾಮಿ 88, ಪ್ರಿಯಂ ಗರ್ಗ್ 35, ಸಮೀರ್ ರಿಜ್ವಿ ಔಟಾಗದೇ 88, ಪ್ರಶಾಂತ್ ವೀರ್ 30, ಝೀಷನ್ ಅನ್ಸಾರಿ 20, ಚೇತನ್ ಸಕಾರಿಯಾ 54ಕ್ಕೆ3, ಅಂಕುರ್ ಪನ್ವರ್ 75ಕ್ಕೆ2, ಪ್ರೇರಕ್ ಮಂಕಡ್ 47ಕ್ಕೆ2) ಸೌರಾಷ್ಟ್ರ: 40.1 ಓವರ್‌ಗಳಲ್ಲಿ 3ಕ್ಕೆ238 (ಹರ್ವಿಕ್ ದೇಸಾಯಿ ಔಟಾಗದೇ 100, ಪ್ರೇರಕ್ ಮಂಕಡ್ 67, ಚಿರಾಗ್ ಜಾನಿ ಔಟಾಗದೇ 40, ವಿಪ್ರಜ್ ನಿಗಂ 46ಕ್ಕೆ1, ಪ್ರಶಾಂತ್ ವೀರ್ 53ಕ್ಕೆ1)
ಇಂದು ಕ್ವಾರ್ಟರ್‌ಫೈನಲ್‌ಗಳು
ಪಂಜಾಬ್–ಮಧ್ಯಪ್ರದೇಶ
ದೆಹಲಿ–ವಿದರ್ಭ
ಪಂದ್ಯ ಆರಂಭ: ಬೆಳಿಗ್ಗೆ 9
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.