ADVERTISEMENT

ಸೈಯದ್‌ ಮುಷ್ತಾಕ್ ಅಲಿ ಟ್ರೋಫಿ: ದೆಹಲಿ ತಂಡಕ್ಕೆ ಶಿಖರ್ ಸಾರಥ್ಯ

ಟ್ವೆಂಟಿ–20 ಕ್ರಿಕೆಟ್ ಟೂರ್ನಿ

ಪಿಟಿಐ
Published 28 ಡಿಸೆಂಬರ್ 2020, 14:44 IST
Last Updated 28 ಡಿಸೆಂಬರ್ 2020, 14:44 IST
ಶಿಖರ್ ಧವನ್‌–‍ಪಿಟಿಐ ಚಿತ್ರ
ಶಿಖರ್ ಧವನ್‌–‍ಪಿಟಿಐ ಚಿತ್ರ   

ನವದೆಹಲಿ: ಭಾರತ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ದೆಹಲಿ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಮುಂದಿನ ತಿಂಗಳು ಆರಂಭವಾಗಲಿರುವ ಟೂರ್ನಿಗಾಗಿ 20 ಆಟಗಾರರ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ.

ಗಾಯದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಆಡದ, ವೇಗಿ ಇಶಾಂತ್ ಶರ್ಮಾ ಅವರನ್ನು ದೆಹಲಿ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಆದರೆ ಎಲ್ಲ ಪಂದ್ಯಗಳಿಗೂ ಅವರು ಲಭ್ಯವಾಗುವುದಿಲ್ಲ ಎಂದು ತಿಳಿದುಬಂದಿದೆ.

ನಿತೀಶ್ ರಾಣಾ, ಪವನ್ ನೇಗಿ ಹಾಗೂ ಮನ್‌ಜೋತ್ ಕಲ್ರಾ ಕೂಡ ತಂಡದಲ್ಲಿದ್ದಾರೆ.

ADVERTISEMENT

ಜನವರಿ 10ರಂದುಸೈಯದ್ ಮುಷ್ತಾಕ್ ಅಲಿ ಟೂರ್ನಿ ಆರಂಭವಾಗಲಿದೆ. ದೆಹಲಿ ತಂಡವು ಎಲೀಟ್‌ ಇ ಗುಂಪಿನಲ್ಲಿದೆ. ಜನವರಿ 11ರಂದು ತನ್ನ ಮೊದಲ ಪಂದ್ಯದಲ್ಲಿ ಶಿಖರ್ ಧವನ್ ಪಡೆಯು ಆತಿಥೇಯ ಮುಂಬೈ ಎದುರು ಸೆಣಸಲಿದೆ.

ತಂಡ ಇಂತಿದೆ: ಶಿಖರ್ ಧವನ್‌, ಇಶಾಂತ್ ಶರ್ಮಾ, ನಿತೀಶ್ ರಾಣಾ, ಹಿಮ್ಮತ್ ಸಿಂಗ್‌, ಕ್ಷಿತಿಜ್ ಶರ್ಮಾ, ಜಾಂಟಿ ಸಿಧು, ಹಿತೇನ್ ದಲಾಲ್‌, ಲಲಿತ್ ಯಾದವ್‌, ಶಿವಾಂಕ್ ವಶಿಷ್ಠ, ಮನ್‌ಜೋತ್ ಕಲ್ರಾ, ಸಿದ್ಧಾಂತ್ ಶರ್ಮಾ, ಅನುಜ್ ರಾವತ್ (ವಿಕೆಟ್‌ ಕೀಪ‍ರ್), ಪ್ರದೀಪ್ ಸಂಗ್ವಾನ್‌, ಸಿಮರ್‌ಜೀತ್ ಸಿಂಗ್‌, ಪವನ್ ನೇಗಿ, ಯುಶ್ ಬದೋನಿ, ವೈಭವ್ ಕಂದಪಾಲ್‌, ಲಕ್ಷ್ಯ ತರೇಜ (ವಿಕೆಟ್ ಕೀಪರ್), ಪವನ್ ಸುಯಲ್‌, ಕರಣ್‌ ದಾಗರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.