ಬೆಂಗಳೂರು: ಕರ್ನಾಟಕ ರಣಜಿ ಕ್ರಿಕೆಟ್ ತಂಡಕ್ಕೆ ಧೀರಜ್ ಜೇ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ.
ದೇವದತ್ತ ಪಡಿಕ್ಕಲ್ ಅವರು ಭಾರತ ತಂಡದಲ್ಲಿ ಆಡಲು ತೆರಳಿರುವುದರಿಂದ ತೆರವಾಗಿರುವ ಸ್ಥಾನಕ್ಕೆ ಧೀರಜ್ ಅವರನ್ನು ಆಯ್ಕೆ ಮಾಡಲಾಗಿದೆ. ಈಚೆಗೆ ಕೂಚ್ ಬಿಹಾರ್ ಟ್ರೋಫಿ ಜಯಿಸಿದ್ದ ಕರ್ನಾಟಕದ 19 ವರ್ಷದೊಳಗಿನವರ ತಂಡಕ್ಕೆ ಧೀರಜ್ ನಾಯಕತ್ವ ವಹಿಸಿದ್ದರು.
ಹುಬ್ಬಳ್ಳಿಯಲ್ಲಿ ಇದೇ 16ರಿಂದ ನಡೆಯಲಿರುವ ಚಂಡೀಗಡ ಎದುರಿನ ಪಂದ್ಯಕ್ಕೆ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಕೆಎಸ್‌ಸಿಎ ಪ್ರಕಟಣೆ ನೀಡಿದೆ.
ತಂಡ: ಮಯಂಕ್ ಅಗರವಾಲ್ (ನಾಯಕ), ನಿಕಿನ್ ಜೋಸ್ (ಉಪನಾಯಕ), ಆರ್. ಸಮರ್ಥ್, ಮನೀಷ್ ಪಾಂಡೆ, ಶರತ್ ಶ್ರೀನಿವಾಸ್ (ವಿಕೆಟ್‌ಕೀಪರ್), ಕೆ.ವಿ. ಅನೀಶ್, ವೈಶಾಖ ವಿಜಯಕುಮಾರ್, ವಿ. ಕೌಶಿಕ್, ಕಿಶನ್ ಬೆದರೆ, ಹಾರ್ದಿಕ್ ರಾಜ್, ವಿದ್ವತ್ ಕಾವೇರಪ್ಪ, ಎಂ. ವೆಂಕಟೇಶ್, ಸುಜಯ್ ಸತೇರಿ, ಕೆ. ಶಶಿಕುಮಾರ್ ಧೀರಜ್ ಜೆ. ಗೌಡ. ಕೋಚ್: ಪಿ.ವಿ. ಶಶಿಕಾಂತ್, ಬ್ಯಾಟಿಂಗ್ ಕೋಚ್: ಮನ್ಸೂರ್ ಅಲಿ ಖಾನ್, ಫೀಲ್ಡಿಂಗ್ ಕೋಚ್: ಶಬರೀಶ್ ಮೋಹನ್, ಮ್ಯಾನೇಜರ್: ಎ. ರಮೇಶ್ ರಾವ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.