ADVERTISEMENT

ಕೊನೆಯ ಸಲ ಟೆಸ್ಟ್‌ ಆಡಲಿರುವ ದಿಮುತ್‌ ಕರುಣಾರತ್ನೆ

ಏಜೆನ್ಸೀಸ್
Published 5 ಫೆಬ್ರುವರಿ 2025, 22:48 IST
Last Updated 5 ಫೆಬ್ರುವರಿ 2025, 22:48 IST
<div class="paragraphs"><p>ದಿಮುತ್‌ ಕರುಣಾರತ್ನೆ</p></div>

ದಿಮುತ್‌ ಕರುಣಾರತ್ನೆ

   

ಗಾಲೆ (ಶ್ರೀಲಂಕಾ): ಶ್ರೀಲಂಕಾ ತಂಡದ ಮಾಜಿ ನಾಯಕ ದಿಮುತ್‌ ಕರುಣಾರತ್ನೆ ಅವರು ಗುರುವಾರ ನೂರನೇ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು, ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಈ ಮೈಲಿಗಲ್ಲಿನ ಪಂದ್ಯ ತಮ್ಮ ಪಾಲಿಗೆ ಕೊನೆಯದಾಗಲಿದೆ ಎಂದು ಪ್ರಕಟಿಸಿದ್ದಾರೆ.

36 ವರ್ಷ ವಯಸ್ಸಿನ ಕರುಣಾರತ್ನೆ ಒಂದು ದಶಕಕ್ಕೂ ಹೆಚ್ಚು ಅವಧಿಯಿಂದ ಲಂಕಾ ತಂಡದ ಅಗ್ರ ಕ್ರಮಾಂಕದಲ್ಲಿ ಆಡಿದ್ದರು. ಆದರೆ ಕಳೆದ 25 ಇನಿಂಗ್ಸ್‌ಗಳಿಂದ ಅವರೂ ಒಂದು ಶತಕ ಬಾರಿಸಿಲ್ಲ.

ADVERTISEMENT

ಎರಡು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ಇನಿಂಗ್ಸ್‌ ಮತ್ತು 242 ರನ್‌ಗಳಿಂದ ಗೆದ್ದುಕೊಂಡಿತ್ತು.

‘ಒಂದಾದರೂ ಟೆಸ್ಟ್‌ ಪಂದ್ಯ ಆಡಬೇಕೆಂಬುದು ನನ್ನ ಬಾಲ್ಯದ ಕನಸಾಗಿತ್ತು’ ಎಂದು ಕರುಣಾರತ್ನೆ ಪಂದ್ಯದ ಮುನ್ನಾದಿನವಾದ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. ನಿವೃತ್ತಿ ನಿರ್ಧಾರ ನನಗೆ ಸಮಾಧಾನ ಮೂಡಿಸಿದೆ ಎಂದೂ ಹೇಳಿದರು. 99 ಟೆಸ್ಟ್‌ ಪಂದ್ಯಗಳಲ್ಲಿ ಅವರು 7,172 ರನ್ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.