ADVERTISEMENT

ಪ್ರಥಮ ದರ್ಜೆ ಕ್ರಿಕೆಟ್ ಸ್ಪಿನ್ ದಿಗ್ಗಜ ರಾಜಿಂದರ್ ಗೋಯಲ್ ನಿಧನ

ಪಿಟಿಐ
Published 22 ಜೂನ್ 2020, 9:49 IST
Last Updated 22 ಜೂನ್ 2020, 9:49 IST
ರಾಜಿಂದರ್ ಗೋಯಲ್ –ಟ್ವಿಟರ್ ಚಿತ್ರ
ರಾಜಿಂದರ್ ಗೋಯಲ್ –ಟ್ವಿಟರ್ ಚಿತ್ರ   

ನವದೆಹಲಿ: ದೇಶಿ ಕ್ರಿಕೆಟ್‌ ದಿಗ್ಗಜ ಲೆಗ್‌ಸ್ಪಿನ್ನರ್ ರಾಜಿಂದರ್ ಗೋಯೆಲ್ (77) ಭಾನುವಾರ ನಿಧನರಾದರು.

ಅವರು ಕೆಲವು ಕಾಲದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಪತ್ನಿ, ಮಗ, ಕ್ರಿಕೆಟಿಗ ನಿತಿನ್ ಗೋಯಲ್ ಇದ್ದಾರೆ.

ಎಡಗೈ ಸ್ಪಿನ್ನರ್ ಆಗಿದ್ದ ರಾಜೀಂದರ್ ಅವರು ಹರಿಯಾಣ ಮತ್ತು ಉತ್ತರ ವಲಯ ತಂಡಗಳಲ್ಲಿ ಆಡಿದ್ದರು. 157 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದ ಅವರು 750 ವಿಕೆಟ್‌ಗಳನ್ನು ಗಳಿಸಿದ್ದಾರೆ. ಬಿಷನ್ ಸಿಂಗ್ ಬೇಡಿ ಅವರು ಆಡುತ್ತಿದ್ದ ಕಾಲಘಟ್ಟದಲ್ಲಿ ಗೋಯಲ್ ಆಡಿದ್ದರು. ಅವರು ತಮ್ಮ 44ನೇ ವಯಸ್ಸಿನವರೆಗೂ ಕ್ರಿಕೆಟ್ ಆಡಿದ್ದರು.

ADVERTISEMENT

ಕೆಲವು ವರ್ಷಗಳ ಹಿಂದೆ ಅವರಿಗೆ ಬಿಸಿಸಿಐನ ಸಿ.ಕೆ. ನಾಯ್ಡು ಜೀವಮಾನ ಸಾಧನೆಯ ಪ್ರಶಸ್ತಿ ನೀಡಿ ಗೌರವಿಸಿತ್ತು. ಬೇಡಿಯವರೇ ಆ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.