ಡ್ಯೂಕ್ ಚೆಂಡು
ಲಂಡನ್: ಪ್ರಸ್ತುತ ಆ್ಯಂಡರ್ಸನ್–ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗಿರುವ ಸಂಗತಿಯೆಂದರೆ ಡ್ಯೂಕ್ ಚೆಂಡಿನ ಬಳಕೆ.
ಸುಮಾರು 30 ಓವರ್‌ಗಳ ಬಳಕೆಯ ನಂತರ ಈ ಚೆಂಡು ತನ್ನ ನೈಜ ಆಕಾರ ಕಳೆದುಕೊಳ್ಳುತ್ತಿದೆ ಎಂದು ಈ ಸರಣಿಯಲ್ಲಿ ಉಭಯ ತಂಡಗಳ ಆಟಗಾರರೂ ಅಂಪೈರ್‌ಗಳಿಗೆ ದೂರು ನೀಡಿದ್ದಾರೆ. ಶುಕ್ರವಾರ ದಿನದಾಟದಲ್ಲಿಯೂ ಭಾರತ ತಂಡದ ನಾಯಕ ಶುಭಮನ್ ಗಿಲ್, ಬೌಲರ್ ಮೊಹಮ್ಮದ್ ಸಿರಾಜ್ ಮತ್ತಿತರರು ಚೆಂಡು ವಿರೂಪಗೊಂಡಿದ್ದು ಬದಲಿಸಬೇಕೆಂದು ಅಂಪೈರ್ ಜೊತೆ ಮಾತುಕತೆ ನಡೆಸಿದರು.
ಈ ಚೆಂಡನ್ನು ತಯಾರಿಸುವ ಬ್ರಿಟಿಷ್ ಕ್ರಿಕೆಟ್ ಬಾಲ್ಸ್ ಲಿಮಿಟೆಡ್ ನ ಮಾಲೀಕರಾದ ದಿಲೀಪ್ ಜಜೋಡಿಯಾ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.
‘ಕಾಲಮಾನಕ್ಕೆ ತಕ್ಕಂತೆ ಚೆಂಡಿನ ಗುಣಮಟ್ಟವನ್ನು ಹೆಚ್ಚಿಸುವತ್ತ ನಾವು ಬದ್ಧರಾಗಿದ್ದೇವೆ. ಹೆಚ್ಚು ತಾಪಮಾನವಿರುವ ಇಂಗ್ಲೆಂಡ್ ಬೇಸಿಗೆಯು ಚೆಂಡಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಅಲ್ಲದೇ ಬ್ಯಾಟ್‌ಗಳೂ ಈಗ ಹೆಚ್ಚು ಬಲಯುತವಾಗಿವೆ. ಇಂತಹದರಲ್ಲಿ 80 ಓವರ್‌ಗಳವರೆಗೆ ಚೆಂಡು ಬಾಳಿಕೆ ಬರುವುದು ಪವಾಡವೇ ಸರಿ‘ ಎಂದರು. ಈ ಕುರಿತು ಅವರು ಇಸಿಬಿ ಜೊತೆಗೂ ಚರ್ಚಿಸಿದ್ದಾರೆ.
ಅವರು ಬೆಂಗಳೂರು ಮೂಲದವರು. ಅವರು ಬಿಷಪ್ ಕಾಟನ್ ಬಾಲಕರ ಶಾಲೆಯ ಹಳೆಯ ವಿದ್ಯಾರ್ಥಿಯೂ ಹೌದು. ಭಾರತೀಯ ಮಾರುಕಟ್ಟೆಯಲ್ಲಿ ವ್ಯಾಪಾರ ವೃದ್ಧಿಗಾಗಿ ಬೆಂಗಳೂರಿನಲ್ಲಿಯೂ ಒಂದು ಕಚೇರಿ ಆರಂಭಿಸುವ ಯೋಜನೆ ರೂಪಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.