ಕೊಲೊಂಬೊ: ಹಿಮ್ಮತ್ ಸಿಂಗ್ (ಔಟಾಗದೆ 126; 140ಎ, 12ಬೌಂ, 2ಸಿ) ಅವರ ಶತಕದ ಬಲದಿಂದ ಭಾರತ ತಂಡ 23 ವರ್ಷದೊಳಗಿನವರ ಎಸಿಸಿ ಎಮರ್ಜಿಂಗ್ ಟೀಮ್ಸ್ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 4 ವಿಕೆಟ್ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿದೆ.
ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಸೋಮವಾರ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 50 ಓವರ್ಗಳಲ್ಲಿ 7 ವಿಕೆಟ್ಗೆ 260 ರನ್ ದಾಖಲಿಸಿತು. ಜಯಂತ್ ಯಾದವ್ ಸಾರಥ್ಯದ ಭಾರತ ತಂಡ 47.3 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ಸೇರಿತು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ: 50 ಓವರ್ಗಳಲ್ಲಿ 7 ವಿಕೆಟ್ಗೆ 260 (ಸಂದನ್ ವೀರಕ್ಕೋಡಿ 22, ಅವಿಷ್ಕಾ ಫರ್ನಾಂಡೊ 80, ಶೆಹಾನ್ ಜಯಸೂರ್ಯ 38, ಕಮಿಂದು ಮೆಂಡಿಸ್ 12, ಅಸೆಲಾ ಗುಣರತ್ನೆ ಔಟಾಗದೆ 67; ಶಿವಂ ಮಾವಿ 62ಕ್ಕೆ3, ಪ್ರಸಿದ್ಧ ಕೃಷ್ಣ 47ಕ್ಕೆ2, ಜಯಂತ್ ಯಾದವ್ 40ಕ್ಕೆ1, ಶಂಸ್ ಮುಲಾನಿ 42ಕ್ಕೆ1).
ಭಾರತ: 47.3 ಓವರ್ಗಳಲ್ಲಿ 6 ವಿಕೆಟ್ಗೆ 261 (ರುತುರಾಜ್ ಗಾಯಕವಾಡ್ 67, ನಿತೀಶ್ ರಾಣಾ 13, ಹಿಮ್ಮತ್ ಸಿಂಗ್ ಔಟಾಗದೆ 126, ದೀಪಕ್ ಹೂಡಾ 26, ಶಂಸ್ ಮುಲಾನಿ ಔಟಾಗದೆ 11; ಅಸಿತಾ ಫರ್ನಾಂಡೊ 20ಕ್ಕೆ2, ಲಸಿತ್ ಅಂಬುಲ್ದೇನಿಯಾ 62ಕ್ಕೆ1, ಕಮಿಂದು ಮೆಂಡಿಸ್ 51ಕ್ಕೆ3).
ಫಲಿತಾಂಶ: ಭಾರತ ತಂಡಕ್ಕೆ 4 ವಿಕೆಟ್ ಗೆಲುವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.