ADVERTISEMENT

ಕ್ರಿಕೆಟ್ | ಖಾಲಿ ಕ್ರೀಡಾಂಗಣದಿಂದ ಸ್ಟೋಕ್ಸ್‌ ಆಟಕ್ಕೆ ಕುತ್ತು: ಡರೆನ್ ಗೌ

ಪಿಟಿಐ
Published 7 ಜೂನ್ 2020, 20:14 IST
Last Updated 7 ಜೂನ್ 2020, 20:14 IST
ಬೆನ್ ಸ್ಟೋಕ್ಸ್
ಬೆನ್ ಸ್ಟೋಕ್ಸ್   

ಲಂಡನ್: ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆದರೆಆಲ್‌ರೌಂಡರ್‌ ಬೆನ್ ಸ್ಟೋಕ್ಸ್‌ ಅವರ ಆಟವು ಕಳೆಗುಂದುವ ಸಾಧ್ಯತೆ ಇದೆ ಎಂದು ಇಂಗ್ಲೆಂಡ್‌ ತಂಡದ ಹಿರಿಯ ಕ್ರಿಕೆಟಿಗ ಡರೆನ್ ಗೌ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ವೈರಸ್‌ ಸೋಂಕು ತಡೆಯಲು ಲಾಕ್‌ಡೌನ್ ವಿಧಿಸಿದ್ದರಿಂದ ಎರಡು ತಿಂಗಳು ಕಾಲ ಸ್ಥಗಿತಗೊಂಡಿದ್ದ ಕ್ರಿಕೆಟ್ ಚಟುವಟಿಕೆಗಳು ಇಂಗ್ಲೆಂಡ್‌ನಲ್ಲಿ ಮುಂದಿನ ತಿಂಗಳಲ್ಲಿ ಮರು ಆರಂಭವಾಗುತ್ತಿವೆ. ಜುಲೈ ಮೊದಲ ಆವರದಲ್ಲಿ ವಿಂಡೀಸ್ ಎದುರಿನ ಸರಣಿಯಲ್ಲಿ ಇಂಗ್ಲೆಂಡ್ ಆಡಲಿದೆ. ‘ಜೀವ ಸುರಕ್ಷಾ ವಾತಾವರಣ’ದಲ್ಲಿ ಪಂದ್ಯಗಳನ್ನು ನಡೆಸುವುದಾಗಿ ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿ ಹೇಳಿದೆ. ಆದರೆ, ಪಂದ್ಯ ವೀಕ್ಷಿಸಲು ಪ್ರೇಕ್ಷಕರ ಪ್ರವೇಶಕ್ಕೆ ನಿರ್ಬಂಧ ಹೇರುವ ಸಾದ್ಯತೆ ಇದೆ ಎನ್ನಲಾಗಿದೆ.

‘ಯಾವುದೇ ದೊಡ್ಡ ಪಂದ್ಯದಲ್ಲಿ ಬೆನ್ ಸ್ಟೋಕ್ಸ್‌ ಆಡುವುದನ್ನು ನೋಡಿ. ಅವರು ಚೆನ್ನಾಗಿ ಆಡಿದರೆ ಆ ಪಂದ್ಯದ ಸೊಬಗು ಬೇರೆಯೇ ಆಗಿರುತ್ತದೆ. ಅದರಲ್ಲೂ ಪ್ರೇಕ್ಷಕರು ತುಂಬಿರುವ ಕ್ರೀಡಾಂಗಣಗಳಲ್ಲಿ ಅವರ ಆಟ ರಂಗೇರುತ್ತದೆ. ಆದ್ದರಿಂದ ಈಗ ಖಾಲಿ ಕ್ರೀಡಾಂಗಣದಲ್ಲಿ ಅವರು ಹೇಗೆ ಆಡುತ್ತಾರೆಂಬ ಕುತೂಹಲ ಇದೆ’ ಎಂದು 49 ವರ್ಷದ ಡರೆನ್ ಸ್ಕೈ ಸ್ಪೋರ್ಟ್ಸ್‌ ಸಂವಾದದಲ್ಲಿ ಹೇಳಿದ್ದಾರೆ.

ADVERTISEMENT

‘ಬಹಳಷ್ಟು ಆಟಗಾರರಿಗೆ ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ಆಡುವುದು ಸಮಸ್ಯೆಯೇನಲ್ಲ. ಆದರೆ ಕೆಲವು ಆಟಗಾರರು ಹೆಚ್ಚು ಪ್ರೇಕ್ಷಕರಿದ್ದಷ್ಟು ಉತ್ತಮವಾಗಿ ಆಡುತ್ತಾರೆ. ಅದು ಅವರ ಸ್ವಭಾವ. ನಾನು ಅದೇ ತರಹದ ಆಟಗಾರನೆಂದು ಆಗ ನಾಯಕರಾಗಿದ್ದ ಗ್ರಹಾಂ ಗೂಚ್‌ ಹೀಗೆ ಹೇಳುತ್ತಿದ್ದರು. ದೊಡ್ಡ ಪ್ರೇಕ್ಷಕರ ಸಮೂಹವಿದ್ದರೆ ಅಮೋಘ ಆಟ ಮೂಡಿರುತ್ತದೆ’ ಎಂದು ಡರೆನ್ ನೆನಪಿಸಿಕೊಂಡಿದ್ದಾರೆ.

ಡರೆನ್ ಇಂಗ್ಲೆಂಡ್ ತಂಡದಲ್ಲಿ 58 ಟೆಸ್ಟ್ ಮತ್ತು 159 ಏಕದಿನ ಪಂದ್ಯಗಳನ್ನು ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.