ADVERTISEMENT

ಇಂಗ್ಲೆಂಡ್–ಪಾಕಿಸ್ತಾನ ಮೂರನೇ ಟೆಸ್ಟ್ ಇಂದಿನಿಂದ : ರೂಟ್ ಬಳಗಕ್ಕೆ ಸರಣಿ ಜಯದ ಛಲ

ಏಜೆನ್ಸೀಸ್
Published 20 ಆಗಸ್ಟ್ 2020, 21:04 IST
Last Updated 20 ಆಗಸ್ಟ್ 2020, 21:04 IST
ಸ್ಟುವರ್ಟ್ ಬ್ರಾಡ್ –ರಾಯಿಟರ್ಸ್ ಚಿತ್ರ
ಸ್ಟುವರ್ಟ್ ಬ್ರಾಡ್ –ರಾಯಿಟರ್ಸ್ ಚಿತ್ರ   

ಸೌತಾಂಪ್ಟನ್: ಶುಕ್ರವಾರ ಏಜಿಸ್ ಬೌಲ್‌ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್‌ನಲ್ಲಿ ಜಯಿಸುವ ಛಲದಲ್ಲಿ ಪಾಕಿಸ್ತಾನ ತಂಡವಿದೆ. ಇದರೊಂದಿಗೆ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಸಮಬಲ ಮಾಡಿಕೊಳ್ಳುವ ಯೋಚನೆ ಅದರದ್ದು.

ಮೊದಲ ಪಂದ್ಯ ದಲ್ಲಿ ಪಾಕ್ ಸೋತಿತ್ತು. ಆದರೆ, ಎರಡನೇ ಪಂದ್ಯ ದಲ್ಲಿ ಚೇತೋಹಾರಿ ಆಟವಾಡಿತ್ತು. ಮಳೆಯಿಂದಾಗಿ ಪಂದ್ಯದ ಬಹಳಷ್ಟು ಸಮಯ ನಷ್ಟವಾದ ಕಾರಣ, ಡ್ರಾ ಆಗಿತ್ತು.ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಜೋ ರೂಟ್ ಬಳಗವು ಗೆದ್ದಿತ್ತು. ತಂಡದ ಡಾಮ್ ಸಿಬ್ಲಿ, ರೋರಿ ಬರ್ನ್ಸ್‌, ಜೋಸ್‌ ಬಟ್ಲರ್ ಉತ್ತಮ ಲಯದಲ್ಲಿದ್ದಾರೆ. ಸ್ಟುವರ್ಟ್ ಬ್ರಾಡ್ ಮತ್ತು ಕ್ರಿಸ್ ವೋಕ್ಸ್ ಕೂಡ ಆಲ್‌ರೌಂಡ್ ಆಟವಾಡುತ್ತಿರುವುದು ತಂಡದ ಬಲ ಇಮ್ಮಡಿಸಿದೆ.

ಪಾಕ್ ತಂಡದ ಬ್ಯಾಟಿಂಗ್ ಶಾನ್ ಮಸೂದ್ ಮತ್ತು ಬಾಬರ್ ಆಜಂ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಬಾಬರ್ 29 ರನ್‌ ಗಳಿಸಿದರೆ ಟೆಸ್ಟ್‌ನಲ್ಲಿ 2000 ಸಾವಿರ ರನ್ ಗಳಿಸಿದ ಸಾಧನೆ ಮಾಡುವರು. ಅದರೊಂದಿಗೆ ವಿರಾಟ್ ಕೊಹ್ಲಿ ಮತ್ತು ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸ್‌ ಅವರಿಗಿಂತ ವೇಗವಾಗಿ ಈ ಸಾಧನೆ ಮಾಡಿದ ಆಟಗಾರನಾಗಲಿದ್ದಾರೆ.

ADVERTISEMENT

ತಂಡಗಳು
ಇಂಗ್ಲೆಂಡ್:
ಜೋ ರೂಟ್ (ನಾಯಕ), ಡಾಮ್ ಸಿಬ್ಲಿ, ರೋರಿ ಬರ್ನ್ಸ್‌, ಜ್ಯಾಕ್ ಕ್ರಾಲಿ, ಓಲಿ ಪೋಪ್, ಜೋಸ್ ಬಟ್ಲರ್, ಕ್ರಿಸ್ ವೋಕ್ಸ್‌, ಸ್ಯಾಮ್ ಕರನ್, ಡಾಮ್ ಬೆಸ್, ಜೋಫ್ರಾ ಆರ್ಚರ್, ಸ್ಟುವರ್ಟ್ ಬ್ರಾಡ್, ಜೇಮ್ಸ್‌ ಆ್ಯಂಡರ್ಸನ್.

ಪಾಕಿಸ್ತಾನ: ಅಜರ್ ಅಲಿ (ನಾಯಕ), ಶಾನ್ ಮಸೂದ್, ಅಬಿದ್ ಅಲಿ, ಬಾಬರ್ ಅಜಂ, ಅಸದ್ ಶಫೀಕ್, ಫವಾದ್ ಆಲಂ, ಮೊಹಮ್ಮದ್ ರಿಜ್ವಾನ್ (ವಿಕೆಟ್‌ಕೀಪರ್), ಯಾಸೀರ್ ಶಾ, ಶಾಹೀನ್ ಆಫ್ರಿದಿ, ಮೊಹಮ್ಮದ್ ಅಬ್ಬಾಸ್, ನಸೀಂ ಶಾ

ಪಂದ್ಯ ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಸೋನಿ ಸಿಕ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.