ADVERTISEMENT

ವೇತನ ಕಡಿತಕ್ಕೆ ಇಂಗ್ಲೆಂಡ್‌ ಆಟಗಾರರ ಒಪ್ಪಿಗೆ

ಏಜೆನ್ಸೀಸ್
Published 23 ಅಕ್ಟೋಬರ್ 2020, 14:12 IST
Last Updated 23 ಅಕ್ಟೋಬರ್ 2020, 14:12 IST
ಇಂಗ್ಲೆಂಡ್‌ ಮತ್ತು ವೇಲ್ಸ್ ಕ್ರಿಕೆಟ್‌ ಮಂಡಳಿ ಲೋಗೊ
ಇಂಗ್ಲೆಂಡ್‌ ಮತ್ತು ವೇಲ್ಸ್ ಕ್ರಿಕೆಟ್‌ ಮಂಡಳಿ ಲೋಗೊ   

ಲಂಡನ್‌: ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯು (ಇಸಿಬಿ) ಆದಾಯ ನಷ್ಟ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ತಂಡದ ಆಟಗಾರರು ಶೇಕಡಾ 15ರಷ್ಟು ವೇತನ ಕಡಿತಕ್ಕೆ ಒಪ್ಪಿಕೊಂಡಿದ್ದಾರೆ.

‘ಮಂಡಳಿಯ ಗುತ್ತಿಗೆ ಹೊಂದಿರುವ ಆಟಗಾರರ ಉಳಿತಾಯ, ಪಂದ್ಯ ಶುಲ್ಕ ಹಾಗೂ ಬೋನಸ್‌ಗಳಲ್ಲಿ ಕಡಿತವಾಗಲಿದೆ‘ ಎಂದು ಇಸಿಬಿ ಹೇಳಿದೆ.

ವೇತನ ಕಡಿತ ಅಕ್ಟೋಬರ್ 1ರಿಂದಲೇ ಜಾರಿಗೆ ಬಂದಿದೆ ಎಂದೂ ಮಂಡಳಿ ತಿಳಿಸಿದೆ.

ADVERTISEMENT

ಇಂಗ್ಲೆಂಡ್‌ ಇತ್ತೀಚೆಗೆ ವೆಸ್ಟ್‌ ಇಂಡೀಸ್‌, ಪಾಕಿಸ್ತಾನ, ಐರ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ತಂಡಗಳ ವಿರುದ್ಧದ ಸರಣಿಗಳಿಗೆ ಆತಿಥ್ಯ ವಹಿಸಿತ್ತು. ಎಲ್ಲ ಪಂದ್ಯಗಳು ಬಹುತೇಕ ಖಾಲಿ ಕ್ರೀಡಾಂಗಣದಲ್ಲಿ ನಡೆದಿದ್ದವು.

‘ಇಂತಹ ಸವಾಲಿನ ಸಮಯದಲ್ಲಿ ಪ್ರಬುದ್ಧತೆ ಹಾಗೂ ಜವಾಬ್ದಾರಿ ತೋರಿದ ತಂಡದ ನಾಯಕರಾದ ಜೊ ರೂಟ್‌, ಏಯಾನ್‌ ಮಾರ್ಗನ್‌ ಸೇರಿದಂತೆ ಎಲ್ಲ ಆಟಗಾರರಿಗೆ ಕೃತಜ್ಞತೆ ಸಲ್ಲುತ್ತವೆ‘ ಎಂದು ತಂಡದ ನಿರ್ದೇಶಕ ಆ್ಯಶ್ಲೆ ಗೈಲ್ಸ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.