ADVERTISEMENT

ENG vs AUS | ಏಕದಿನ ಕ್ರಿಕೆಟ್ ಪಂದ್ಯ: ಯಾರ ಮುಡಿಗೆ ಸರಣಿ ಕಿರೀಟ?

ಇಂಗ್ಲೆಂಡ್–ಆಸ್ಟ್ರೇಲಿಯಾ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 1:36 IST
Last Updated 16 ಸೆಪ್ಟೆಂಬರ್ 2020, 1:36 IST
ಏಯಾನ್ ಮಾರ್ಗನ್   –ರಾಯಿಟರ್ಸ್ ಚಿತ್ರ
ಏಯಾನ್ ಮಾರ್ಗನ್   –ರಾಯಿಟರ್ಸ್ ಚಿತ್ರ   

ಮ್ಯಾಂಚೆಸ್ಟರ್: ತವರಿನಲ್ಲಿ ಮತ್ತೊಂದು ಸರಣಿ ಗೆಲುವಿನ ಕನಸಿನಲ್ಲಿ ಇಂಗ್ಲೆಂಡ್ ತೇಲುತ್ತಿದೆ. ಕೊರೊನಾ ಕಾಲದಲ್ಲಿ ತಾನು ಆಡುತ್ತಿರುವ ಮೊಟ್ಟಮೊದಲಏಕದಿನ ಕ್ರಿಕೆಟ್ ಸರಣಿಯಲ್ಲಿ ಜಯಿಸಿ ಮೆರೆಯುವ ಛಲದಲ್ಲಿ ಆಸ್ಟ್ರೇಲಿಯಾ ಬಳಗವಿದೆ.

ಇದರಿಂದಾಗಿ ಬುಧವಾರ ಎಮಿರೇಟ್ಟ್‌ ಓಲ್ಡ್‌ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯಲಿರುವ ಉಭಯ ತಂಡಗಳು ನಡುವಿನ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯವು ತೀವ್ರ ಕುತೂಹಲ ಕೆರಳಿಸಿದೆ.

ಮೂರು ದಿನಗಳ ಹಿಂದಷ್ಟೇ ಆಸ್ಟ್ರೇಲಿಯಾ ಕೈಗೆ ‌‌ಬಂದಿದ್ದ ತುತ್ತು ಬಾಯಿಗೆ ಬಂದಿರಲಿಲ್ಲ. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಸಾಧಾರಣ ಮೊತ್ತದ ಗುರಿ ನೀಡಿದ್ದ ಏಯಾನ್ ಮಾರ್ಗನ್ ಬಳಗವು ಆಸ್ಟ್ರೇಲಿಯಾವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು. ವೇಗಿ ಜೋಫ್ರಾ ಆರ್ಚರ್ ಅಮೋಘ ಬೌಲಿಂಗ್ ಬಲದಿಂದ ಆತಿಥೇಯರು ಸರಣಿಯಲ್ಲಿ 1–1ರ ಸಮಬಲ ಸಾಧಿಸಿದ್ದರು. ಇಲ್ಲದಿದ್ದರೆ ಅದೇ ದಿನ ಆಸ್ಟ್ರೇಲಿಯಾ ಸರಣಿ ಜಯದ ಸಂಭ್ರಮ ಆಚರಿಸಬಹುದಿತ್ತು.

ADVERTISEMENT

ಆ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬೌಲರ್ ಜೋಶ್ ಹ್ಯಾಜಲ್‌ವುಡ್ ಮತ್ತು ಸ್ಪಿನ್ನರ್ ಆ್ಯಡಂ ಜಂಪಾ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ತಲೆಗೆ ಬಿದ್ದ ಚಂಡಿನ ಪೆಟ್ಟಿನಿಂದ ಚೇತರಿಸಿಕೊಂಡಿರುವ ಮತ್ತು ಎಲ್ಲ ಪರೀಕ್ಷೆಗಳಲ್ಲಿಯೂ ಫಿಟ್ ಆಗಿ ಹೊರಹೊಮ್ಮಿರುವ ಸ್ಟೀವ್ ಸ್ಮಿತ್ ತಂಡಕ್ಕೆ ಮರಳಿದರೆ ಬ್ಯಾಟಿಂಗ್ ಬಲ ಹೆಚ್ಚಲಿದೆ. ಇಂಗ್ಲೆಂಡ್ ತಂಡದಲ್ಲಿ ಅಗ್ರಕ್ರಮಾಂಕದ ಆಟಗಾರರು ತಮ್ಮ ಲಯ ಕಂಡುಕೊಂಡರೆ ರನ್‌ಗಳ ಹೊಳೆ ಹರಿಯುವ ಸಾಧ್ಯತೆ ಇದೆ.

ತಂಡಗಳು: ಇಂಗ್ಲೆಂಡ್: ಏಯಾನ್ ಮಾರ್ಗನ್ (ನಾಯಕ), ಮೋಯಿನ್ ಅಲಿ, ಸ್ಯಾಮ್ ಕರನ್, ಕ್ರಿಸ್ ವೋಕ್ಸ್‌, ಜಾನಿ ಬೆಸ್ಟೊ, ಸ್ಯಾಮ್ ಬಿಲ್ಲಿಂಗ್ಸ್,ಆದಿಲ್ ರಶೀದ್, ಜೋಫ್ರಾ ಆರ್ಚರ್, ಟಾಮ್ ಕರನ್, ಟಾಮ್ ಬ್ಯಾಂಟನ್, ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಮಾರ್ಕ್ ವುಡ್.

ಆಸ್ಟ್ರೇಲಿಯಾ: ಆ್ಯರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಮಾರ್ಕಸ್ ಸ್ಟೋನಿಸ್, ಡೇನಿಯಲ್ ಸ್ಯಾಮ್ಸ್‌, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಆ್ಯಷ್ಟನ್ ಆಗರ್, ಅಲೆಕ್ಸ್‌ ಕ್ಯಾರಿ (ವಿಕೆಟ್‌ಕೀಪರ್), ಮ್ಯಾಥ್ಯೂ ವೇಡ್ (ವಿಕೆಟ್‌ಕೀಪರ್), ಸೀನ್ ಅಬಾಟ್, ಜೋಷ್ ಹ್ಯಾಜಲ್‌ವುಡ್, ರಿಲೆ ಮೆರೆಡಿತ್, ಮಿಷೆಲ್ ಸ್ಟಾರ್ಕ್, ಆ್ಯಡಂ ಜಂಪಾ, ಜೋಷ್ ಫಿಲಿಪ್. ಸ್ಟೀವನ್ ಸ್ಮಿತ್.

ನೇರಪ್ರಸಾರ: ಸೋನಿ ಸಿಕ್ಸ್
ಸಮಯ: ಸಂಜೆ 5.30ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.