ADVERTISEMENT

ವಿಶ್ವ ಕಪ್‌ ಮೆಲುಕು 2010 | ಇಂಗ್ಲೆಂಡ್‌ ಕನಸು ನನಸಾದ ಕ್ಷಣ....

​ಪ್ರಜಾವಾಣಿ ವಾರ್ತೆ
Published 25 ಮೇ 2024, 23:30 IST
Last Updated 25 ಮೇ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಐಸಿಸಿ ಟಿ20 ಎರಡನೇ ವಿಶ್ವಕಪ್‌ ಟೂರ್ನಿ (2009 ಜೂನ್‌ 5–21) ಮುಗಿದು ಕೇವಲ 10 ತಿಂಗಳು ಕಳೆಯುವಷ್ಟರಲ್ಲಿ ಮೂರನೇ ಟಿ20 ವಿಶ್ವಕಪ್‌ (2010, 30 ಏಪ್ರಿಲ್‌ – 16 ಮೇ) ನಡೆಯಿತು. 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ನಿಗದಿಯಾಗಿದ್ದುದು ಇದಕ್ಕೆ ಕಾರಣ. ವೆಸ್ಟ್‌ ಇಂಡೀಸ್‌ನ ಮೂರು ತಾಣಗಳಲ್ಲಿ– ಬ್ರಿಜ್‌ಟೌನ್‌ (ಬಾರ್ಬಾಡೋಸ್‌), ಪ್ರಾವಿಡೆನ್ಸ್‌ (ಗಯಾನ) ಮತ್ತು ಗ್ರಾಸ್‌ ಐಲ್ (ಸೇಂಟ್‌ ಲೂಸಿಯಾ)ನಲ್ಲಿ ಪಂದ್ಯಗಳು ನಡೆದವು.

ಇಂಗ್ಲೆಂಡ್‌ ತಂಡದವರು ಇಲ್ಲಿ ಟ್ರೋಫಿ ಎತ್ತುವ ಮೂಲಕ ಐಸಿಸಿಯ ಟೂರ್ನಿಯೊಂದನ್ನು ಗೆಲ್ಲುವ ದೀರ್ಘಕಾಲದ ಕನಸನ್ನು ನನಸು ಮಾಡಿಕೊಂಡರು. ಏಷ್ಯಾ ಹೊರತಾದ ತಂಡ ಮೊದಲ ಸಲ ಚುಟುಕು ವಿಶ್ವಕಪ್‌ನಲ್ಲಿ ಚಾಂಪಿಯನ್ ಆಯಿತು. ಮೊದಲೆರಡು ವಿಶ್ವಕಪ್‌ಗಳಲ್ಲಿ ಕ್ರಮವಾಗಿ ಭಾರತ ಮತ್ತು ಪಾಕಿಸ್ತಾನ ಚಾಂಪಿಯನ್ ಆಗಿದ್ದವು.

ADVERTISEMENT

ಅಫ್ಗಾನಿಸ್ತಾನ ಇದೇ ಮೊದಲ ಬಾರಿ ಪ್ರಮುಖ ಟೂರ್ನಿಯೊಂದರಲ್ಲಿ ಆಡುವ ಅವಕಾಶ ಪಡೆಯಿತು. ಅರ್ಹತಾ ಟೂರ್ನಿಯ ಫೈನಲ್‌ನಲ್ಲಿ ಆ ತಂಡ, ಐರ್ಲೆಂಡ್ ಮೇಲೆ ಜಯಗಳಿಸಿತ್ತು. ಎರಡೂ ತಂಡಗಳು ವಿಶ್ವಕಪ್‌ನಲ್ಲಿ ಆಡಿದವು.

ಪ್ರಮುಖ ಅಂಶಗಳು

* ಮೂರನೇ ವಿಶ್ವಕಪ್‌: 2010

* ಆತಿಥ್ಯ: ವೆಸ್ಟ್‌ ಇಂಡೀಸ್

* ವಿಜೇತ ತಂಡ: ಇಂಗ್ಲೆಂಡ್‌

* ರನ್ನರ್ ಅಪ್‌: ಆಸ್ಟ್ರೇಲಿಯಾ

* ಪಂದ್ಯಗಳು: 27

* ಸರಣಿ ಶ್ರೇಷ್ಠ: ಕೆವಿನ್‌ ಪೀಟರ್ಸನ್‌ (ಇಂಗ್ಲೆಂಡ್‌)

* ಶ್ರೇಷ್ಠ ಬ್ಯಾಟರ್‌: ಮಹೇಲ ಜಯವರ್ಧನೆ (ಶ್ರೀಲಂಕಾ, 302 ರನ್)

* ಶ್ರೇಷ್ಠ ಬೌಲರ್‌: ಡರ್ಕ್ ನ್ಯಾನೆಸ್‌ (ಆಸ್ಟ್ರೇಲಿಯಾ, 14 ವಿಕೆಟ್‌)

ಪ್ರಮುಖ ಅಂಶಗಳು

* ಧೋನಿ ಸತತ ಮೂರನೇ ಬಾರಿ ಟಿ20 ವಿಶ್ವಕಪ್‌ ನಾಯಕರಾಗಿದ್ದರು. ಮೊದಲ ಆವೃತ್ತಿಯ ವಿಜೇತ ಭಾರತ ಮತ್ತೊಮ್ಮೆ ಸೂಪರ್ 8 ಹಂತದಲ್ಲಿ ಮುಗ್ಗರಿಸಿತು. ಆಡಿದ ಮೂರೂ ಪಂದ್ಯಗಳಲ್ಲಿ ಸೋಲನುಭವಿಸಿತು.

* ಸುರೇಶ್‌ ರೈನಾ, ‘ಸಿ’ ಗುಂಪಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 101 (60 ಎಸೆತ) ರನ್ ಬಾರಿಸಿದರು. ಇದು ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಭಾರತ ಆಟಗಾರನೊಬ್ಬನ ಮೊದಲ ಶತಕ. ಶ್ರೀಲಂಕಾದ

* ಮೇ 16ರಂದು ನಡೆದ ಫೈನಲ್‌ನಲ್ಲಿ, ಮೈಕೆಲ್ ಕ್ಲಾರ್ಕ್ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿ 6 ವಿಕೆಟ್‌ಗೆ 147 ರನ್ ಹೊಡೆಯಿತು. 8 ರನ್‌ಗೆ 3 ವಿಕೆಟ್‌ ಕಳೆದುಕೊಂಡಾಗ ಡೇವಿಡ್‌ ಹಸ್ಸಿ 59 (54ಎ) ಅರ್ಧ ಶತಕ ಬಾರಿಸಿ ಕುಸಿತ ತಪ್ಪಿಸಿದ್ದರು. ಪಾಲ್ ಕಾಲಿಂಗ್‌ವುಡ್‌ ನೇತೃತ್ವದ ಇಂಗ್ಲೆಂಡ್‌ ಇನ್ನೂ ಮೂರು ಓವರ್ ಬಾಕಿಯಿರುವಂತೆ 3 ವಿಕೆಟ್‌ಗೆ 148 ರನ್ ಹೊಡೆಯಿತು. ಕ್ರೆಗ್‌ ಕಿಸ್ವೆಟರ್‌ 63 (49ಎ) ಅರ್ಧ ಶತಕ ಬಾರಿಸಿ ಪಂದ್ಯದ ಆಟಗಾರ ಎನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.