ADVERTISEMENT

ಬಾಂಗ್ಲಾದ ಹಿರಿಯ ಕ್ರಿಕೆಟಿಗ ನಫೀಸ್‌ಗೆ ಕೋವಿಡ್‌ ದೃಢ

ಪಿಟಿಐ
Published 20 ಜೂನ್ 2020, 7:44 IST
Last Updated 20 ಜೂನ್ 2020, 7:44 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ಢಾಕಾ: ಬಾಂಗ್ಲಾದೇಶದ ಹಿರಿಯ ಕ್ರಿಕೆಟಿಗ ನಫೀಸ್‌ ಇಕ್ಬಾಲ್‌ ಅವರಿಗೆ ಕೋವಿಡ್‌–19 ಇರುವುದು ದೃಢಪಟ್ಟಿದೆ.

ನಫೀಸ್ ಅವರು ಬಾಂಗ್ಲಾ ಏಕದಿನ ಕ್ರಿಕೆಟ್‌ ತಂಡದ ನಾಯಕ ತಮೀಮ್‌ ಇಕ್ಬಾಲ್‌ ಅವರ ಹಿರಿಯ ಸಹೋದರ.

ತಮಗೆ ಕೊರೊನಾ ಸೋಂಕು ತಗುಲಿರುವ ವಿಷಯವನ್ನು ನಫೀಸ್‌ ಅವರೇ ಬಹಿರಂಗಪಡಿಸಿದ್ದು, ಚಿತ್ತಗಾಂಗ್‌ನಲ್ಲಿರುವ ಸ್ವಗೃಹದಲ್ಲಿ ಅವರು ಸ್ವಯಂ ಪ್ರತ್ಯೇಕವಾಸದಲ್ಲಿದ್ದಾರೆ ಎಂದು ‘ದಿ ಡೈಲಿ ಸ್ಟಾರ್‌’ ದಿನಪತ್ರಿಕೆ ವರದಿ ಮಾಡಿದೆ.

ADVERTISEMENT

ಬಲಗೈ ಬ್ಯಾಟ್ಸ್‌ಮನ್‌ ಆಗಿದ್ದ ನಫೀಸ್‌ 2003ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2006ರ ನಂತರ ಅವರಿಗೆ ಬಾಂಗ್ಲಾ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ.

35 ವರ್ಷ ವಯಸ್ಸಿನ ಆಟಗಾರ, ಬಾಂಗ್ಲಾ ಪರ ಒಟ್ಟು 11 ಟೆಸ್ಟ್‌ ಹಾಗೂ 16 ಏಕದಿನ ಪಂದ್ಯಗಳನ್ನು ಆಡಿದ್ದು ಕ್ರಮವಾಗಿ 518 ಮತ್ತು 309 ರನ್‌ಗಳನ್ನು ಗಳಿಸಿದ್ದಾರೆ.

ಹೋದ ತಿಂಗಳು ಬಾಂಗ್ಲಾದೇಶದ ಹಿರಿಯ ಕ್ರಿಕೆಟಿಗ ಆಶಿಕುರ್‌ ರಹಮಾನ್‌ ಅವರಿಗೂ ಕೊರೊನಾ ಸೋಂಕು ತಗುಲಿತ್ತು.

ಪಾಕಿಸ್ತಾನದ ಹಿರಿಯ ಕ್ರಿಕೆಟಿಗರಾದ ಶಾಹಿದ್‌ ಅಫ್ರಿದಿ, ತೌಫಿಕ್‌ ಉಮರ್‌ ಮತ್ತು ಜಾಫರ್‌ ಸರ್ಫರಾಜ್‌ ಅವರಿಗೂ ಕೋವಿಡ್‌ ಇರುವುದು ದೃಢಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.