ಕ್ರಿಕೆಟ್ (ಸಾಂದರ್ಭಿಕ ಚಿತ್ರ)
ದಂಬುಲಾ: ಆರಂಭ ಆಟಗಾರ್ತಿಯರಾದ ಗುಲ್ ಫಿರೋಜಾ ಅವರ ಅರ್ಧ ಶತಕ (57, 35ಎ, 4x10) ಮತ್ತು ಮುನೀಬಾ ಅಲಿ (ಔಟಾಗದೇ 46) ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡ ಮಹಿಳಾ ಏಷ್ಯಾ ಕಪ್ ಟಿ20 ಲೀಗ್ ಪಂದ್ಯದಲ್ಲಿ ನೇಪಾಳ ತಂಡದ ಮೇಲೆ 9 ವಿಕೆಟ್‌ಗಳ ನಿರಾಯಾಸ ಜಯ ಪಡೆಯಿತು.
ಭಾನುವಾರ ನಡೆದ ಈ ಪಂದ್ಯದಲ್ಲಿ ಮೊದಲು ಆಡಿದ ನೇಪಾಳ 20 ಓವರುಗಳಲ್ಲಿ 6 ವಿಕೆಟ್‌ಗೆ 108 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭ ಆಟಗಾರ್ತಿ ಸೀತಾ ರಾಣಾ (26), ಪೂಜಾ ಮಹತೊ (25) ಮತ್ತು ಕೊನೆಯಲ್ಲಿ ಕಬಿತಾ ಜೋಶಿ (ಔಟಾಗದೇ 31, 23ಎ) ಅಲ್ಪ ಕೊಡುಗೆ ನೀಡಿದರು. ಪಾಕ್ ಕಡೆ ಎಡಗೈ ಸ್ಪಿನ್ನರ್ ಸಾದಿಯಾ ಇಕ್ಬಾಲ್ 19 ರನ್ನಿಗೆ 2 ವಿಕೆಟ್ ಉರುಳಿಸಿದರು.
ಆದರೆ ಪಾಕಿಸ್ತಾನ ಕೇವಲ 11.5 ಓವರುಗಳಲ್ಲಿ 1 ವಿಕೆಟ್‌ಗೆ 110 ರನ್ ಹೊಡೆದು ರನ್ ರೇಟ್ ಅನ್ನು ಸಾಕಷ್ಟು ಸುಧಾರಿಸಿಕೊಂಡಿತು. ಫಿರೋಜಾ ಮತ್ತು ಮುನೀಬಾ ಮೊದಲ ವಿಕೆಟ್‌ಗೆ ಕೇವಲ 67 ಎಸೆತಗಳಲ್ಲಿ 105 ರನ್ ಸೇರಿಸಿದರು.
ಸಂಕ್ಷಿಪ್ತ ಸ್ಕೋರು: ನೇಪಾಳ: 20 ಓವರುಗಳಲ್ಲಿ 6 ವಿಕೆಟ್‌ಗೆ 108 (ಕಬಿತಾ ಜೋಶಿ ಔಟಾಗದೇ 41, ಸೀತಾ ರಾಣಾ ಮಾಗರ್ 26; ಸಾದಿಕ್ ಇಕ್ಬಾಲ್ 19ಕ್ಕೆ2); ಪಾಕಿಸ್ತಾನ: 11.5 ಓವರುಗಳಲ್ಲಿ 1 ವಿಕೆಟ್‌ಗೆ 110 (ಗುಲ್ ಫಿರೋಜಾ 57, ಮುನೀಬಾ ಅಲಿ ಔಟಾಗದೇ 46). ಪಂದ್ಯದ ಆಟಗಾರ್ತಿ: ಗುಲ್ ಫಿರೋಜಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.