ADVERTISEMENT

ಕೊಕೇನ್ ವ್ಯವಹಾರ: ಸ್ಟುವರ್ಟ್‌ ಮ್ಯಾಕ್‌ಗಿಲ್ ದೋಷಿ

ಪಿಟಿಐ
Published 13 ಮಾರ್ಚ್ 2025, 15:32 IST
Last Updated 13 ಮಾರ್ಚ್ 2025, 15:32 IST
ಸ್ಟುವರ್ಟ್‌ ಮ್ಯಾಕ್‌ಗಿಲ್
ಸ್ಟುವರ್ಟ್‌ ಮ್ಯಾಕ್‌ಗಿಲ್   

ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಲೆಗ್‌ ಸ್ಪಿನ್ನರ್‌ ಸ್ಟುವರ್ಟ್‌ ಮ್ಯಾಕ್‌ಗಿಲ್ ಅವರು ಕೊಕೇನ್ ವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿದೆ. ಆದರೆ, ದೊಡ್ಡ ಪ್ರಮಾಣದ ಮಾದಕವಸ್ತು ಪೂರೈಕೆ ಪ್ರಕರಣದಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ.

2021ರ ಏಪ್ರಿಲ್ ನಡೆದಿದ್ದ ಒಂದು ಕೆ.ಜಿ ಕೊಕೇನ್ (ಅಂದಾಜು ₹1.80 ಕೋಟಿ ಮೌಲ್ಯ) ವ್ಯವಹಾರಕ್ಕೆ ಅನುಕೂಲ ಮಾಡಿಕೊಟ್ಟ ಆರೋಪದಿಂದ 54 ವರ್ಷದ ಮ್ಯಾಕ್‌ಗಿಲ್ ಅವರನ್ನು ಗುರುವಾರ ಸಿಡ್ನಿ ಜಿಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿತು.

ಆಸ್ಟ್ರೇಲಿಯಾ ಪರ 44 ಟೆಸ್ಟ್ ಪಂದ್ಯಗಳನ್ನು ಆಡಿರುವ ಮ್ಯಾಕ್‌ಗಿಲ್, ತೀರ್ಪನ್ನು ಓದುತ್ತಿದ್ದಂತೆ ಕೊಂಚ ಭಾವೋದ್ವೇಗಕ್ಕೆ ಒಳಗಾದರು ಎಂದು ಆಸ್ಟ್ರೇಲಿಯಾದ ಮಾಧ್ಯಮ ವರದಿ ಮಾಡಿದೆ. ಅವರ ಶಿಕ್ಷೆಯ ಪ್ರಮಾಣದ ವಿಚಾರಣೆಯನ್ನು ಎಂಟು ವಾರಗಳ ಕಾಲ ಮುಂದೂಡಲಾಗಿದೆ.  

ADVERTISEMENT

ಕೊಕೇನ್‌ ವಹಿವಾಟಿನಲ್ಲಿ ತಮ್ಮ ಪಾತ್ರವಿಲ್ಲ ಎಂದು ಮ್ಯಾಕ್‌ಗಿಲ್ ನ್ಯಾಯಾಧೀಶರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೆ, ಪ್ರಾಸಿಕ್ಯೂಟರ್‌ಗಳು ಅವರ ಪಾಲ್ಗೊಳ್ಳುವಿಕೆಯಿಲ್ಲದೆ ವ್ಯವಹಾರ ನಡೆಯಲು ಸಾಧ್ಯವಿಲ್ಲ ಎಂದು ವಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.