ADVERTISEMENT

ಭಾರತದ ಮಾಜಿ ಕ್ರಿಕೆಟಿಗ, ರಾಜಕಾರಣಿ ಚೇತನ್‌ ಚೌಹಾನ್‌ಗೆ ಕೊರೊನಾ ಸೋಂಕು

ಏಜೆನ್ಸೀಸ್
Published 12 ಜುಲೈ 2020, 15:47 IST
Last Updated 12 ಜುಲೈ 2020, 15:47 IST
ಭಾರತದ ಮಾಜಿ ಕ್ರಿಕೆಟಿಗ ಮತ್ತು ಉತ್ತರ ಪ್ರದೇಶದ ಕ್ರೀಡಾ ಸಚಿವ ಚೇತನ್‌ ಚೌಹಾನ್‌
ಭಾರತದ ಮಾಜಿ ಕ್ರಿಕೆಟಿಗ ಮತ್ತು ಉತ್ತರ ಪ್ರದೇಶದ ಕ್ರೀಡಾ ಸಚಿವ ಚೇತನ್‌ ಚೌಹಾನ್‌   

ಲಖನೌ: ಭಾರತದ ಮಾಜಿ ಕ್ರಿಕೆಟಿಗ ಮತ್ತು ಉತ್ತರ ಪ್ರದೇಶದ ಸೈನಿಕ ಕಲ್ಯಾಣ ಸಚಿವರೂ ಆಗಿರುವ ಚೇತನ್‌ ಚೌಹಾನ್‌ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಚೇತನ್‌ ಚೌಹಾನ್‌ ಅವರಲ್ಲಿ ಕೊರೊನಾ ಗುಣಲಕ್ಷಣಗಳು ಕಾಣಿಕೊಂಡಿದ್ದರಿಂದ ಶುಕ್ರವಾರ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದರು.

72 ವರ್ಷದ ಚೌಹಾನ್‌ ಅವರು ಲಖನೌನ ಸಂಜಯ್‌ ಗಾಂಧಿ ಪಿಜಿಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚೌಹಾನ್‌ ಅವರಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಅವರ ಕುಟುಂಬದ ಇನ್ನುಳಿದ ಸದಸ್ಯರನ್ನೂ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರೆಲ್ಲರೂ ಹೋಮ್‌ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶ ಸೈನಿಕ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸುತ್ತಿರವ ಚೌಹಾನ್, ಕೊರೊನಾ ವೈರಸ್ ಸೋಂಕಿಗೆ ಒಳಗಾದ ಕೆಲವೇ ಕೆಲವು ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ.

ADVERTISEMENT

ಕೆಲ ದಿನಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಮತ್ತು ಸ್ಕಾಟ್ಲೆಂಡ್‌ನ ಮಜೀದ್ ಹಕ್ ಅವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಅವರೀಗ ಚಿಕಿತ್ಸೆ ಪಡೆದ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಚೇತನ್‌ ಚೌಹಾನ್‌ ಅವರು 1969 ಮತ್ತು 1978ರ ನಡುವೆ 40 ಟೆಸ್ಟ್ ಪಂದ್ಯಗಳಲ್ಲಿ ಆಡಿ, 2084 ರನ್ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.