ADVERTISEMENT

ವೇಗದ ಶತಕ ಬಾರಿಸಿದಾಗ ಶಾಹಿದ್‌ ಅಫ್ರಿದಿಯ ವಯಸ್ಸು 16 ಅಲ್ಲ; 19 !

ಆತ್ಮಕಥೆ ‘ಗೇಮ್‌ ಚೇಂಜರ್‌’ ನಲ್ಲಿ ನೈಜ ವಯಸ್ಸು ಬಹಿರಂಗ

ಏಜೆನ್ಸೀಸ್
Published 3 ಮೇ 2019, 9:26 IST
Last Updated 3 ಮೇ 2019, 9:26 IST
   

ನವದೆಹಲಿ:ವೇಗದ ಶತಕ ಬಾರಿಸಿದಾಗ ತನ್ನ ವಯಸ್ಸು 16 ಆಗಿರಲಿಲ್ಲ ಎಂದುಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್‌ ಅಫ್ರಿದಿ ಅವರ ಆತ್ಮಕಥೆ ‘ಗೇಮ್‌ ಚೇಂಜರ್‌’ ನಲ್ಲಿ ಬರೆದುಕೊಂಡಿದ್ದಾರೆ.

ನೈರೋಬಿಯಲ್ಲಿ 1996ರಲ್ಲಿ ಶ್ರೀಲಂಕಾದ ವಿರುದ್ಧ ನಡೆದ ಪಂದ್ಯದಲ್ಲಿ37 ಬಾಲ್‌ಎದುರಿಸಿ ಶತಕಬಾರಿಸುವ ಮೂಲಕ ಅಫ್ರಿದಿ ದಾಖಲೆ ಬರೆದಿದ್ದರು. ಅಫ್ರಿದಿ ತಮ್ಮ 16ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಾರೆ ಎಂದು ಹೇಳಲಾಗಿತ್ತು .

ಆದರೆ ನನಗೆ ಆಗ 19 ವರ್ಷವಾಗಿತ್ತು,.ನಾನು ಹುಟ್ಟಿದ್ದು 1975ರಲ್ಲಿ.ಅಧಿಕೃತ ದಾಖಲೆಗಳಲ್ಲಿ ನನ್ನ ವರ್ಷ ತಪ್ಪಾಗಿದೆ ಎಂದು ಅಫ್ರಿದಿ ಗೇಮ್ ಚೇಂಜರ್‌ನಲ್ಲಿ ಬರೆದಿದ್ದಾರೆ.

ADVERTISEMENT

ಅಧಿಕೃತ ದಾಖಲೆಗಳಲ್ಲಿ ಅಫ್ರಿದಿ ಹುಟ್ಟಿದ ವರ್ಷ 1980 ಎಂದು ನಮೂದಿಸಲಾಗಿದೆ.

ಅಫ್ರಿದಿ ಹೇಳುವಂತೆ ಅವರ ಹುಟ್ಟಿದ ವರ್ಷ 1975 ಆಗಿದ್ದರೆ, 1996ರಲ್ಲಿಅವರ ವಯಸ್ಸು 21 ಆಗಿರಬೇಕಿತ್ತು. ಆದರೆ ತಾನು 19 ವರ್ಷದವನಾಗಿದ್ದೆ ಎಂದು ಈತ ಹೇಳಿರುವುದು ಗೊಂದಲಕ್ಕೆ ಕಾರಣವಾಗಿದೆ.

‘ಗೇಮ್ ಚೇಂಜರ್’ ಈಗಾಗಲೇ ಹೊಸ ಅಲೆಯನ್ನೆಬ್ಬಿಸಿದೆ. ಮಾಧ್ಯಮದ ಪ್ರಚೋದಿತ ಮಾತುಗಳಿಗೆ ಕಿವಿಗೊಡಬೇಡಿ. ನಾನು ಬರೆದಿರುವ ಪುಸ್ತಕವನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿ ಎಂದು ಟ್ವೀಟ್ ಮೂಲಕಮನವಿಮಾಡಿದ್ದಾರೆ.

ಅಫ್ರಿದಿ ಕ್ರಿಕೆಟ್ ಪಯಣಕ್ಕೆ ವಿದಾಯ ಹೇಳುವ ಮುನ್ನ27 ಟೆಸ್ಟ್, 398 ಏಕದಿನ ಪಂದ್ಯ, 99 ಟಿ–ಟ್ವೆಂಟಿ ಪಂದ್ಯಗಳನ್ನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.