ಧಮ್ಮಿಕಾ ನಿರೋಷನ
ಚಿತ್ರ ಕೃಪೆ: @akalugalage
ಕೊಲಂಬೊ: ಶ್ರೀಲಂಕಾ 19 ವರ್ಷದೊಳಗಿನವರ ಕ್ರಿಕೆಟ್ ತಂಡದ ಮಾಜಿ ನಾಯಕ ಧಮ್ಮಿಕಾ ನಿರೋಷನ ಅವರನ್ನು ಬುಧವಾರ ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
41 ವರ್ಷದ ನಿರೋಷನ್ ಅವರು ಅಂಬಲಂಗೊಡಾದಲ್ಲಿರುವ ತಮ್ಮ ಮನೆಯ ಹೊರಗೆ ಓಡಾಡುತ್ತಿದ್ದರು. ಈ ಸಂದರ್ಭದಲ್ಲಿ ಅಪರಿಚಿತನೊಬ್ಬ ಗುಂಡಿಕ್ಕಿ ಪರಾರಿಯಾದನೆನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಿದ್ದಾರೆ ಎಂದು ಕ್ರಿಕ್‌ಇನ್ಫೋ ಡಾಟ್ ಕಾಮ್ ವೆಬ್‌ಸೈಟ್ ವರದಿ ಮಾಡಿದೆ.
ನಿರೋಷನ್ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳು ಇದ್ದಾರೆ.
2000ನೇ ಇಸವಿಯಲ್ಲಿ 19 ವರ್ಷದೊಳಗಿನವರ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ವೇಗದ ಬೌಲರ್ ಆಗಿದ್ದ ಅವರು 2002ರಲ್ಲಿ ಅವರು ತಂಡದ ನಾಯಕರೂ ಆಗಿದ್ದರು. ಆದರೆ ಸೀನಿಯರ್ ತಂಡದಲ್ಲಿ ಅವರು ಆಡಲಿಲ್ಲ. ಬಹುಬೇಗನೆ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.