ADVERTISEMENT

ಬಾಂಗ್ಲಾ ಆಟಗಾರರಿಗೆ ಸನ್ಮಾನ

ಪಿಟಿಐ
Published 21 ಅಕ್ಟೋಬರ್ 2019, 19:56 IST
Last Updated 21 ಅಕ್ಟೋಬರ್ 2019, 19:56 IST

ಕೋಲ್ಕತ್ತ: ಬಾಂಗ್ಲಾದೇಶ ತಂಡವು ಚೊಚ್ಚಲ ಟೆಸ್ಟ್‌ ಆಡಿದಾಗ ತಂಡದಲ್ಲಿದ್ದ ಆಟಗಾರರನ್ನು ಸನ್ಮಾನಿಸಲು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ತೀರ್ಮಾನಿಸಿದ್ದಾರೆ.

2000ರಲ್ಲಿ ಬಾಂಗ್ಲಾ ತಂಡ ಭಾರತದ ಎದುರು ಮೊದಲ ಟೆಸ್ಟ್‌ ಆಡಿತ್ತು. ಆಗ ಗಂಗೂಲಿ ಮೊದಲ ಬಾರಿ ಭಾರತ ಟೆಸ್ಟ್‌ ತಂಡವನ್ನು ಮುನ್ನಡೆಸಿದ್ದರು.

ನವೆಂಬರ್‌ 22ರಿಂದ 26ರವರೆಗೆ ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯುವ ಭಾರತ–ಬಾಂಗ್ಲಾ ನಡುವಣ ಪಂದ್ಯದ ವೇಳೆ ಸಮಾರಂಭ ನಡೆಸಲು ನಿರ್ಧರಿಸಲಾಗಿದೆ. ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರಿಗೂ ಆಹ್ವಾನ ನೀಡುವುದಾಗಿ ಗಂಗೂಲಿ ತಿಳಿಸಿದ್ದಾರೆ. ಹಸೀನಾ ಅವರು ಬೆಲ್‌ ಬಾರಿಸುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.