ADVERTISEMENT

ಫಿಟ್‌ನೆಸ್‌ಗೆ ಒತ್ತು ಕೊಡಿ:ಸಚಿನ್

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 19:45 IST
Last Updated 30 ಡಿಸೆಂಬರ್ 2018, 19:45 IST
ಸಚಿನ್ ತೆಂಡೂಲ್ಕರ್‌
ಸಚಿನ್ ತೆಂಡೂಲ್ಕರ್‌   

ಕ್ರಿಕೆಟ್ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರು ಫಿಟ್‌ನೆಸ್‌ ಕಡೆಗೆ ಒತ್ತು ಕೊಡುವಂತೆ ಹೇಳಿದ್ದಾರೆ. ಡೈನಿಂಗ್ ಟೇಬಲ್‌ ಮುಂದೆ ಗಂಟೆ ಗಟ್ಟಲೆ ಕುಳಿತು ಊಟ ಮಾಡುವುದಕ್ಕೆ ನೀಡುವ ಪ್ರಾಮುಖ್ಯತೆ ಜಿಮ್‌ನಲ್ಲಿ ಬೆವರು ಹರಿಸುವುದಕ್ಕೆ ನೀಡಿದರೆ ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

‘ನಮ್ಮ ದೇಶದಲ್ಲಿ ಕ್ರೀಡೆಗಳನ್ನು ಇಷ್ಟಪಡುವ ಜನರು ಇದ್ದಾರೆಯೇ ಹೊರತು, ಕ್ರೀಡೆಗಳನ್ನು ಆಡುವುದಕ್ಕೆ ಇಷ್ಟಪಡುವವರು ಕಡಿಮೆ. ದುರಂತವೆಂದರೆ, ಇತ್ತೀಚಿನ ವರದಿಗಳ ಪ್ರಕಾರ ಅತಿ ಹೆಚ್ಚು ಮಧುಮೇಹಿ ರೋಗಿಗಳಿರುವ ದೇಶಗಳ ಪೈಕಿ ಭಾರತ ವಿಶ್ವಕ್ಕೇ ರಾಜಧಾನಿ. ಅತಿ ಹೆಚ್ಚು ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿರುವ ಜನರ ಪೈಕಿ ಭಾರತೀಯರು ಮೂರನೇ ಸ್ಥಾನದಲ್ಲಿದ್ದಾರೆ’ ಎಂದು ಫಿಟ್‌ನೆಸ್‌ ಬಗೆಗಿನ ಜಾಗೃತಿ ಮೂಡಿಸುವಂತಹ ಮಾತುಗಳನ್ನು ಆಡಿದರು.

ವಿಶ್ವದಲ್ಲೇ ಅತಿ ಹೆಚ್ಚು ಯುವ ಜನತೆಯನ್ನು ಹೊಂದಿರುವ ರಾಷ್ಟ್ರವಾಗಿ ನಮ್ಮ ದೇಶ ಗುರುತಿಸಿಕೊಂಡಿದ್ದರೂ ಇಂತಹ ಸಮಸ್ಯೆಗಳಿಂದಾಗಿ ಯಾವುದೇ ಇದರಿಂದ ದೇಶಕ್ಕೆ ಯಾವುದೇ ಪ್ರಯೋಜನವಿಲ್ಲ ಎಂಬುದಂತೂ ಸಾಬೀತಾಗುತ್ತಿದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.