ಗ್ಲೆನ್ ಫಿಲಿಪ್ಸ್
ನವದೆಹಲಿ: ತೊಡೆಸಂದು ನೋವಿನಿಂದಾಗಿ ನ್ಯೂಜಿಲೆಂಡ್‌ನ ಆಲ್‌ರೌಂಡರ್ ಗ್ಲೆನ್ ಫಿಲಿಪ್ಸ್ ಅವರು ಐಪಿಎಲ್‌ನಲ್ಲಿ ಆಡುವ ಗುಜರಾತ್ ಟೈಟನ್ಸ್ ತಂಡದಿಂದ ಹೊರಬಿದ್ದಿದ್ದಾರೆ.
ಏ. 6ರಂದು ಸನ್‌ರೈಸರ್ಸ್ ವಿರುದ್ಧ ಪಂದ್ಯದಲ್ಲಿ ಅವರಿಗೆ ನೋವು ಕಾಣಿಸಿಕೊಂಡಿತ್ತು ಎಂದು ಫ್ರಾಂಚೈಸಿಯ ಪ್ರಕಟಣೆ ತಿಳಿಸಿದೆ. ಅವರು ಈ ಋತುವಿನಲ್ಲಿ ಒಂದೂ ಪಂದ್ಯ ಆಡಿರಲಿಲ್ಲ. ಆದರೆ ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಸಬ್‌ಸ್ಟಿಟ್ಯೂಟ್ ಆಗಿ ಕಣಕ್ಕೆ ಇಳಿದಿದ್ದರು. ಫೀಲ್ಡಿಂಗ್ ವೇಳೆ ನೋವಿನಿಂದಾಗಿ ಕುಂಟುತ್ತ ಹೊರನಡೆದಿದ್ದರು.
ಟೈಟನ್ಸ್ ತಂಡ ಅವರಿಗೆ ಬದಲಿಯಾಗಿ ಯಾರನ್ನೂ ಹೆಸರಿಸಿಲ್ಲ. ಕಳೆದ ವಾರ ಇದೇ ತಂಡವನ್ನು ಪ್ರತಿನಿಧಿಸುವ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಅವರು ‘ವೈಯಕ್ತಿಕ ತುರ್ತು ಕಾರಣ’ಗಳಿಂದ ಹಠಾತ್ ಆಗಿ ತವರಿಗೆ ಮರಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.