ADVERTISEMENT

Bangladesh vs West Indies| ಮೋಮಿನುಲ್ ಹಕ್ ಶತಕ

ಟೆಸ್ಟ್ ಕ್ರಿಕೆಟ್‌: ವೆಸ್ಟ್ ಇಂಡೀಸ್ ತಂಡಕ್ಕೆ 395 ರನ್‌ಗಳ ಗುರಿ

ಏಜೆನ್ಸೀಸ್
Published 6 ಫೆಬ್ರುವರಿ 2021, 15:21 IST
Last Updated 6 ಫೆಬ್ರುವರಿ 2021, 15:21 IST
ಬಾಂಗ್ಲಾದೇಶ ತಂಡದ ಲಿಟನ್ ದಾಸ್‌ (ಎಡ) ಹಾಗೂ ಮೋಮಿನುಲ್ ಹಕ್‌–ಎಎಫ್‌ಪಿ ಚಿತ್ರ
ಬಾಂಗ್ಲಾದೇಶ ತಂಡದ ಲಿಟನ್ ದಾಸ್‌ (ಎಡ) ಹಾಗೂ ಮೋಮಿನುಲ್ ಹಕ್‌–ಎಎಫ್‌ಪಿ ಚಿತ್ರ   

ಚಿತ್ತಗಾಂವ್‌: ವೃತ್ತಿಜೀವನದ 10ನೇ ಶತಕ ಬಾರಿಸಿದ ನಾಯಕ ಮೋಮಿನುಲ್ ಹಕ್‌ (115) ಅವರ ಭರ್ಜರಿ ಆಟದ ನೆರವಿನಿಂದ ಬಾಂಗ್ಲಾದೇಶ ತಂಡವು ವೆಸ್ಟ್ ಇಂಡೀಸ್ ತಂಡಕ್ಕೆ ಶನಿವಾರ 395 ರನ್‌ಗಳ ಗೆಲುವಿನ ಗುರಿ ನೀಡಿತು.

ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದದ ನಾಲ್ಕನೇ ದಿನದಾಟದಲ್ಲಿ ಗುರಿ ಬೆನ್ನತ್ತಿರುವ ಪ್ರವಾಸಿ ತಂಡ ಮೂರು ವಿಕೆಟ್‌ ಕಳೆದುಕೊಂಡು 110 ರನ್ ಗಳಿಸಿತ್ತು.

ಶತಕ ಸಿಡಿಸಿದ ಹಕ್‌ ಇದೇ ವೇಳೆ 3,000 ರನ್‌ಗಳ ಮೈಲಿಗಲ್ಲೂ ತಲುಪಿದರು. ಅಲ್ಲದೆ ಬಾಂಗ್ಲಾ ಪರ ಅತಿ ಹೆಚ್ಚು ಶತಕ ಗಳಿಸಿದ ಆಟಗಾರ ಎನಿಸಿಕೊಂಡರು. ಈ ಸಾಧನೆ ತಮೀಮ್ ಇಕ್ಬಾಲ್ (9) ಅವರ ಹೆಸರಿನಲ್ಲಿತ್ತು. ಆಲ್‌ರೌಂಡರ್‌ ಮಹದಿ ಹಸನ್‌, ವೆಸ್ಟ್ ಇಂಡೀಸ್‌ ತಂಡದ ಎರಡನೇ ಇನಿಂಗ್ಸ್‌ನಲ್ಲಿ ಮೂರು ವಿಕೆಟ್‌ ಗಳಿಸಿ, ತಮ್ಮ ಅದ್ಭುತ ಲಯ ಮುಂದುವರಿಸಿದರು.

ADVERTISEMENT

ಮೂರು ವಿಕೆಟ್‌ಗೆ 47 ರನ್‌ಗಳೊಂದಿಗೆ ಶನಿವಾರ ದಿನದಾಟ ಆರಂಭಿಸಿದ ಆತಿಥೇಯ ಬಾಂಗ್ಲಾ, 8 ವಿಕೆಟ್‌ಗೆ 223 ರನ್‌ ಗಳಿಸಿದ ಡಿಕ್ಲೇರ್ ಮಾಡಿಕೊಂಡಿತು. ಹಕ್ ಅವರಿಗೆ ಲಿಟನ್ ದಾಸ್‌ (69) ಉತ್ತಮ ಸಹಕಾರ ನೀಡಿದರು.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್: ಬಾಂಗ್ಲಾದೇಶ: 430: ವೆಸ್ಟ್ ಇಂಡೀಸ್: 96.1 ಓವರ್‌ಗಳಲ್ಲಿ 259: ಎರಡನೇ ಇನಿಂಗ್ಸ್: ಬಾಂಗ್ಲಾದೇಶ: 67.5 ಓವರ್‌ಗಳಲ್ಲಿ 8 ವಿಕೆಟ್‌ಗೆ 223 ಡಿಕ್ಲೇರ್ಡ್‌ (ಮೋಮಿನುಲ್ ಹಕ್‌ 115, ಲಿಟನ್ ದಾಸ್‌ 69, ಮುಷ್ಫಿಕುರ್ ರಹೀಂ 18; ಜೊಮೆಲ್‌ ವಾರಿಕನ್‌ 57ಕ್ಕೆ 3, ರಕೀಮ್‌ ಕಾರ್ನವಾಲ್‌ 81ಕ್ಕೆ 3, ಶಾನನ್‌ ಗೇಬ್ರಿಯಲ್‌ 37ಕ್ಕೆ 2). ವೆಸ್ಟ್ ಇಂಡೀಸ್‌: 40 ಓವರ್‌ಗಳಲ್ಲಿ 3ಕ್ಕೆ 110 (ಕೈಲ್ ಮಯರ್ಸ್‌ ಬ್ಯಾಟಿಂಗ್ 37, ಜಾನ್ ಕ್ಯಾಂಪ್‌ಬೆಲ್‌ 23, ಕ್ರೇಗ್ ಬ್ರಾಥ್‌ವೇಟ್‌ 20; ಮಹದಿ ಹಸನ್‌ 52ಕ್ಕೆ 3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.