ಹಾರ್ದಿಕ್ ಪಾಂಡ್ಯ
ಚಿತ್ರ: Hardik Pandya ಇನ್‌ಸ್ಟಾಗ್ರಾಂ
ಮೈದಾನಕ್ಕಿಂತ ಹೆಚ್ಚಾಗಿ ಮೈದಾನದ ಹೊರಗಿನ ವಿಚಾರಗಳಿಂದ ಸದಾ ಸುದ್ದಿಯಲ್ಲಿರುವರು ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ. ಅವರು ಇತ್ತೀಚೆಗೆ ಮಾಡೆಲ್ ಮಹೈಕಾ ಶರ್ಮಾ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದನ್ನು ಕಾಣಬಹುದು. ಇದೀಗ ಅವರು ತಮ್ಮ ಜೀವನದಲ್ಲಿನ ಪ್ರಮುಖ ವ್ಯಕ್ತಿಗಳು ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಸದ್ಯ, ಹಾರ್ದಿಕ್ ಪಾಂಡ್ಯ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಜೀವನ 3 ಪ್ರಮುಖರು (My Big 3) ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲಿ ತಮ್ಮ ಪ್ರಸ್ತುತ ಗೆಳತಿ ಮಹೈಕಾ ಶರ್ಮಾ, ಮಗ ಅಗಸ್ತ್ಯ ಹಾಗೂ ಸಾಕು ಪ್ರಾಣಿಗಳು ಇರುವುದನ್ನು ನೋಡಬಹುದು.
ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಅವರು ಮಾಡೆಲ್ ಆಗಿರುವ ಮಹೈಕಾ ಶರ್ಮಾ ಜೊತೆಗಿನ ಫೋಟೊಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಆದರೆ, ಈಗ ಹಂಚಿಕೊಂಡಿರುವ ಫೋಟೊಗಳಲ್ಲಿ ಇಬ್ಬರೂ ಒಟ್ಟಿಗೆ ಪ್ರಾರ್ಥಿಸುತ್ತಿರುವುದು, ಜಿಮ್‌ನಲ್ಲಿ ವ್ಯಾಯಾಮ ಮಾಡುವುದು ಹಾಗೂ ಮಹೈಕಾ ಕೆನ್ನೆಗೆ ಹಾರ್ದಿಕ್ ಚುಂಬಿಸುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಸದ್ಯ, ಹಾರ್ದಿಕ್ ಪಾಂಡ್ಯ ಹಂಚಿಕೊಂಡಿರುವ ಫೋಟೊಗಳಿಗೆ ‘ಮೈ ಬಿಗ್ 3’ ಎಂದು ಶೀರ್ಷಿಕೆ ನೀಡಿದ್ದಾರೆ. ಜೊತೆಗೆ ಓಂ ಹಾಗೂ ಬ್ಯಾಟ್‌ನ ಎಮೋಜಿ ಇರುವುದನ್ನು ಸಹ ಅದರಲ್ಲಿ ಕಾಣಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.