ADVERTISEMENT

ದಕ್ಷಿಣ ಆಫ್ರಿಕ ವಿರುದ್ಧ ಟಿ–20 ಸರಣಿ: ಧೋನಿಗಿಲ್ಲ ಅವಕಾಶ; ಹಾರ್ದಿಕ್‌ಗೆ ಸ್ಥಾನ

ಪಿಟಿಐ
Published 29 ಆಗಸ್ಟ್ 2019, 18:44 IST
Last Updated 29 ಆಗಸ್ಟ್ 2019, 18:44 IST
ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ   

ನವದೆಹಲಿ: ಅನುಭವಿ ಆಟಗಾರ ಮಹೇಂದ್ರ ಸಿಂಗ್‌ ಧೋನಿ ಅವರನ್ನು, ಪ್ರವಾಸಿ ದಕ್ಷಿಣ ಆಫ್ರಿಕ ವಿರುದ್ಧ ಮೂರು ಪಂದ್ಯಗಳ ಟಿ–20 ಸರಣಿಗೆ ಆಯ್ಕೆಗಾರರು ಪಗರಿಗಣಿಸಿಲ್ಲ. ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಪುನರಾಗಮನ ಮಾಡಿದ್ದು, 15 ಮಂದಿಯ ತಂಡದಲ್ಲಿ ಆಗಿರುವ ಬದಲಾವಣೆ ಇದೊಂದೇ.

ಆಟದಿಂದ ಎರಡು ತಿಂಗಳು ದೂರವಿದ್ದು, ಸೇನೆಯ ಪ್ಯಾರಾಶೂಟ್‌ ರೆಜಿಮೆಂಟ್‌ನಲ್ಲಿ 15 ದಿನ ಕೆಲಸ ಮಾಡಿದ್ದ ಧೋನಿ, ಸದ್ಯ ಅಮೆರಿಕದಲ್ಲಿ ಕಳೆಯುತ್ತಿದ್ದಾರೆ.

ದಕ್ಷಿಣ ಆಫ್ರಿಕ ವಿರುದ್ಧ ಈ ಸರಣಿಗೆ ಲಭ್ಯತೆ ಬಗ್ಗೆ ಆಯ್ಕೆಗಾರರು ಧೋನಿ ಅವರ ಜೊತೆ ಮಾತನಾಡಿದ್ದಾರೆಯೇ ಎಂಬುದು ಗೊತ್ತಾಗಿಲ್ಲ.

ADVERTISEMENT

ಪಾಂಡ್ಯ ಸೋದರರಲ್ಲಿ ಕಿರಿಯವರಾದ ಹಾರ್ದಿಕ್‌ ಅವರಿಗೆ ಸತತ ಪಂದ್ಯಗಳ ಒತ್ತಡದ ನಂತರ ವಿಶ್ರಾಂತಿ ನೀಡಲಾಗಿತ್ತು. ಉಳಿದಂತೆ, ಅಮೆರಿಕ ಮತ್ತು ಕೆರೀಬಿಯನ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಟಿ–20 ಪಂದ್ಯಗಳಲ್ಲಿ ಆಡಿದ ತಂಡವನ್ನೇ ಉಳಿಸಿಕೊಳ್ಳಲಾಗಿದೆ.ವೇಗದ ಬೌಲರ್‌ ಭುವನೇಶ್ವರ ಕುಮಾರ್‌ ಅವರಿಗೆ ಸತತ ಪಂದ್ಯಗಳ ನಂತರ ವಿಶ್ರಾಂತಿ ನೀಡಲಾಗಿದೆ.

ತಂಡದಿಂದ ಕೈಬಿಟ್ಟಿರುವ ಆಟಗಾರ ಇವರೊಬ್ಬರೇ. ಸೆ. 15, 18 ಮತ್ತು 22ರಂದು ಮೂರು ಪಂದ್ಯಗಳು ನಿಗದಿಯಾಗಿವೆ.

ತಂಡ ಇಂತಿದೆ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ಶಿಖರ್ ಧವನ್‌, ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ರಿಷಬ್‌ ಪಂತ್‌ (ವಿಕೆಟ್‌ ಕೀಪರ್‌), ರವೀಂದ್ರ ಜಡೇಜ, ಕೃನಾಲ್ ಪಾಂಡ್ಯ, ವಾಷಿಂಗ್ಟನ್‌ ಸುಂದರ್‌, ರಾಹುಲ್‌ ಚಾಹರ್‌, ಖಲೀಲ್‌ ಅಹ್ಮದ್, ದೀಪಕ್‌ ಚಾಹರ್‌, ನವದೀಪ್‌ ಸೈನಿ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.